ಮೈಸೂರು : ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ರಾಜಮಾತೆ ಪ್ರಮೋದಾದೇವಿ, ಪುತ್ರ ಯದುವೀರ್ ಒಡೆಯರ್ ಜೊತೆ ಪಲ್ಲವೋತ್ಸವ ಸಮಾರಂಭದಲ್ಲಿ ಭಾಗಿಯಾದರು.

ನಾಡಿನ ಒಳಿತಿಗಾಗಿ ಮೈಸೂರು ರಾಜಮನೆತನ ಪೂಜೆ ಸಲ್ಲಿಸಿದರು. ನಾಡಿನಲ್ಲಿ ಮಳೆ ಬೆಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ತಿರುಪತಿಯ ಶ್ರೀದೇವಿ, ಭೂದೇವಿ ಶ್ರೀ ಮಲ್ಲಪ್ಪಸ್ವಾಮಿ ದೇವರಿಗೂ ಪೂಜೆ ಸಲ್ಲಿಕೆ ಮಾಡಲಾಯಿತು. ಪ್ರಮೋದಾದೇವಿ, ಒಡೆಯರ್ ಹಾಗೂ ಯದುವೀರ್ ಒಡೆಯರ್ ಉತ್ಸವ ಮೂರ್ತಿಗಳ ಮೆರವಣಿಗೆಯನ್ನು ನೆರವೇರಿಸಿದರು.