ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡು ನಗರದ ಮೈಸೂರು ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯ ರೈಲ್ವೆ ಮೇಲ್ಸೇತುವೆಗೆ ಸ್ವಾಭಿಮಾನಿ ಚಕ್ರವರ್ತಿ ದಿ.ಶ್ರೀನಿವಾಸ್ ಪ್ರಸಾದ್ ರವರ ಹೆಸರನ್ನು ನಾಮಕರಣ ಮಾಡಿ ಸೇತುವೆಯನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಮತ್ತು ಶ್ರೀನಿವಾಸ್ ಪ್ರಸಾದ್ ರವರ ಸುಪುತ್ರಿ ಪ್ರತಿಮಾ ಪ್ರಸಾದ್ ಲೋಕಾರ್ಪಣೆ ಮಾಡಿದರು.

ನಂತರ ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ವಿವಿಧ ಹುದ್ದೆಗಳಲ್ಲಿ ಪ್ರಾಮಾಣಿಕ ಹಾಗೂ ನಿಷ್ಠಾವಂತ ಸೇವೆ ಸಲ್ಲಿಸಿದರು, ನೇರ ನಡೆ ನುಡಿಯ ಪ್ರತಿರೂಪವಾದ, ಶೋಷಿತ ಅಹಿಂದ ವರ್ಗಗಳ ಹಕ್ಕಿಗಾಗಿ ಸದಾ ಹೋರಾಟ ಮಾಡಿದ್ದ ಮೇರು ರಾಜಕಾರಣಿ ದಿ. ವಿ. ಶ್ರೀನಿವಾಸ್ ಪ್ರಸಾದ್ ಅವರ ಹೆಸರನ್ನು ನಂಜನಗೂಡಿನ ರೈಲ್ವೆ ಮೇಲ್ಸೇತುವೆಗೆ ನೀಡಿರುವುದು ಗೌರವದಾಯಕ ಹಾಗೂ ಸ್ಮರಣೀಯವಾಗಿದೆ. ಇದು ಅವರ ಸಮಾಜಮುಖಿ ಚಿಂತನೆ ಮತ್ತು ಜನಪರ ಸೇವೆಯ ಕುರಿತು ತೋರಿದ ಬದ್ಧತೆಯ ಪ್ರಾತಿನಿಧ್ಯವಾಗಿದೆ. ಮುಂದಿನ ಪೀಳಿಗೆಗೆ ಪ್ರೇರಣೆಯಾಗಿ ಅವರು ಮಾಡಿದ ಕೆಲಸಗಳು ಸದಾ ನೆನಪಾಗಿ ಉಳಿಯಲಿ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಜೆ ವಿಜಯ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಸಿ ಬಸವರಾಜ್, ಮೈಸೂರು ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾಸಿದ್ದಶೆಟ್ಟಿ, ರಾಮಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಮಾರುತಿ, ನಗರ ಬ್ಲಾಕ್ ಅಧ್ಯಕ್ಷ ಸಿ. ಎಂ ಶಂಕರ್, ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠ ನಾಯಕ, ಇಂಧನ್ ಬಾಬು, ಸೇರಿದಂತೆ ನಗರಸಭಾ ಸದಸ್ಯರುಗಳು ದಿ. ವಿ. ಶ್ರೀನಿವಾಸ್ ಪ್ರಸಾದ್ ಹಾಗೂ ದಿ.ಧ್ರುವನಾರಾಯಣ್ ಅಭಿಮಾನಿಗಳು ಹಾಜರಿದ್ದರು.