ಮೈಸೂರು : ಜಿಲ್ಲಾಡಳಿತ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ದಸರಾ ನೋಡಲಾಗದೆ ಪ್ರವಾಸಿಗರು ಪರದಾಡಿದರು. ದುಡ್ಡು ಕೊಟ್ಟು ಟಿಕೆಟ್ ಪಡೆದರೂ ದಸರಾ ನೋಡಲಿಲ್ಲ. ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಡಿಸಿ ಕಮಿಷನರ್ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದರು. 6500 ರೂಪಾಯಿ ಕೊಟ್ಟು ಗೋಲ್ಡ್ ಟಿಕೆಟ್ ಖರೀದಿ ಮಾಡಿದ್ದೇವೆ. ನಮ್ಮನ್ನೇ ಅರಮನೆ ಒಳಗಡೆ ಬಿಟ್ಟಿಲ್ಲ. ಹಣ ಕೊಟ್ಟು ನ್ಯಾವೇಕೆ ಟಿಕೆಟ್ ಖರೀದಿ ಮಾಡಬೇಕು. ಸೂಕ್ತ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಅಂದ್ರೆ ಟಿಕೆಟ್ ಯಾಕೆ ಮಾರಾಟ ಮಾಡಬೇಕು.
ಬೆಳಿಗ್ಗೆ ಅರಮನೆಗೆ ಬಂದಿದ್ದೇವೆ. 12.30 ಗಂಟೆ ತನಕ ಕ್ಯೂ ನಿಂತಿದ್ದೇವೆ. ಕುರ್ಚಿ ಖಾಲಿ ಇಲ್ಲ ಆ ಕಡೆ ಹೋಗಿ ಈ ಕಡೆ ಹೋಗಿ ಅಂತ ಆಟ ಆಡಿಸಿದ್ರು. ಈಗ ವಾಪಸ್ ಹೋಗಿ ಅಂತಿದ್ದಾರೆ. ನಮ್ಮ ಟಿಕೆಟ್ ದುಡ್ಡು ಹೋಯಿತು. ನಮ್ಮ ಆಸನದಲ್ಲಿ ಬೇರೆ ಯಾರೂ ಕೂರಲು ಸಾಧ್ಯ. ಪಾಸ್ ವಿಚಾರದಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಮೈಸೂರಿನಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

