ಮೈಸೂರು : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಷೂ ಎಸೆತ ಪ್ರಕರಣ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ಷೂ ಎಸೆದ ವಕೀಲನನ್ನು ಗಲ್ಲಿಗೇರಿಸುವಂತೆ ಒತ್ತಾಯ ಮಾಡಲಾಯಿತು. ಮೈಸೂರು ವಿವಿ ದಲಿತ ವಿದ್ಯಾರ್ಥಿ ಒಕ್ಕೂಟ ಸಂಶೋಧಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಪಂಜು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ವಕೀಲ ರಾಕೇಶ್ ಕಿಶೋರ್ ವಿರುದ್ದ ಘೋಷಣೆ ಕೂಗಲಾಯಿತು.  ವಕೀಲನ ಭಾವಚಿತ್ರಕ್ಕೆ ಚಪ್ಪಲಿಯಿಂದ ಒಡೆದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯ ನ್ಯಾಯಮೂರ್ತಿ ಬಿಎಸ್ ಗವಾಯಿ ಅವರ ಮೇಲಿನ ಅಪಮಾನವಾಗಿದೆ. ವಕೀಲ ರಾಕೇಶ್ ಕಿಶೋರ್ ನನ್ನು  ಗಲ್ಲಿಗೇರಿಸಿ ಎಂದರು.

ಗವಾಯಿಯವರಿಗೆ ಆದ ಅಪಮಾನ‌ ದೇಶಕ್ಕೆ ಆದ ಅಪಮಾನ. ಈ ಅಪಮಾನವನ್ನು ಎಂದಿಗೂ ನಾವು ಸಹಿಸಿಕೊಳ್ಳುವುದಿಲ್ಲ. ಅಪಮಾನ ಮಾಡಿರುವ ವಕೀಲನ ವಿರುದ್ದ ಕ್ರಮ ಆಗಲೇಬೇಕು. ಒಂದು ವೇಳೆ ಕ್ರಮವಾಗದಿದ್ದರೆ ದಂಗೆಯಾಗಲಿದೆ ಎಂದು ಪ್ರತಿಭಟನಾಕಾರರು  ಎಚ್ಚರಿಕೆ ನೀಡಿದರು.