ಮೈಸೂರು: ಸಹಕಾರ ಸಚಿವ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಮಾಪ್ತರೂ ಆದ ಕೆ.ಎನ್.ರಾಜಣ್ಣ ವಜಾ ಮಾಡಿರುವ ಕ್ರಮವನ್ನ ಖಂಡಿಸಿ ಕರ್ನಾಟಕ ರಾಜ್ಯ ನಾಯಕ ಯುವಸೇನೆ ವತಿಯಿಂದ ಪ್ರತಿಭಟನೆ ನಡೆಯಿತು.

ರಾಜ್ಯಾಧ್ಯಕ್ಷ ದೇವರಾಜ್ ಟಿ ಕಾಟೂರ್ ನೇತೃತ್ವದಲ್ಲಿ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಯಾವುದೇ ಸಮಜಾಯಿಷಿ ನೀಡದೆ ಏಕಾಏಕಿ ಸಚಿವ ಸ್ಥಾನಕ್ಕೆ ವಜಾ ಮಾಡಿರುವುದು ವಾಲ್ಮೀಕಿ ಸಮುದಾಯಕ್ಕೆ ಅಪಮಾನ ಮಾಡಿರುವುದಾಗಿ ಆರೋಪಿಸಿ ಪ್ರತಿಭಟನೆ ನಡೆಸಿದರು.

ಇತ್ತೀಚೆಗೆ ವಾಲ್ಮೀಕಿ ನಿಗಮದ ಹಗರಣವನ್ನ ಹೊಣೆ ಮಾಡಿ ಸಚಿವ ನಾಗೇಂದ್ರ ರವರನ್ನ ಜೈಲಿಗೆ ಕಳಿಸಿದ್ದರು. ಇವೆಲ್ಲಾ ಬೆಳವಣಿಗೆ ನಾಯಕ ಸಮಾಜದ ರಾಜಕಾರಿಣಿಗಳನ್ನ ತುಳಿಯುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿ ಹೈಕಮಾಂಡ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಕೆ.ಎನ್.ರಾಜಣ್ಣ ರವರನ್ನ ಸಂಪುಟಕ್ಕೆ ಮರುಸೇರ್ಪಡೆ ಮಾಡುವಂತೆ ಒತ್ತಾಯಿಸಿದರು.