ಮೈಸೂರು: ಮಹಾನಗರ ಪಾಲಿಕೆ ನೌಕರರಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ ಕರೆ ಹಿನ್ನಲೆ ಪ್ರತಿಭಟನೆ ನಡೆಯಿತು.

ಕೆಲಸ ಬಹಿಷ್ಕರಿಸಿ ರಾಜ್ಯ ಸರ್ಕಾರದ ವಿರುದ್ದ ಪಾಲಿಕೆ ನೌಕರರು ಪ್ರತಿಭಟನೆಗೆ ಮುಂದಾದರು. ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ಸವಲತ್ತುಗಳು ಸ್ಥಳೀಯ ಸಂಸ್ಥೆ ನೌಕರರಿಗೂ ದೊರೆಯಬೇಕು. 7ನೇ ವೇತನ ಆಯೋಗದ ಸೌಲಭ್ಯ ಪಾಲಿಕೆ ನೌಕರರಿಗೂ ವಿಸ್ತರಿಸಿ. ವೇತನದ ಶೇ100 ರಷ್ಟು ಅನುದಾನ ರಾಜ್ಯ ಹಣಕಾಸು ಆಯೋಗದಿಂದಲೆ ಬಿಡುಗಡೆ ಮಾಡಬೇಕು.

ಪಾಲಿಕೆ ನೌಕರರ ನೇಮಕಾತಿ ನಿಯಮಗಳು ತಿದ್ದುಪಡಿಯಾಗಬೇಕು. ರಾಜ್ಯ ಸರ್ಕಾರಿ ನೌಕರರ ದೊರೆಯುವ ಕೆ.ಜಿ.ಐ.ಡಿ , ಜಿಐಎಸ್ ಸೌಲಭ್ಯ, ಜ್ಯೋತಿ ಸಂಜೀವಿನಿ ಯೋಜನೆ ನಮಗೂ ವಿಸ್ತರಿಸಿ ಮುಂತಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಾಲಿಕೆ ನೌಕರರ ಪ್ರತಿಭಟನೆ ನಡೆಯಿತು.

ಸರ್ಕಾರ ನಮ್ಮ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಪರಿಷತ್ ನಮ್ಮ ಪರಿಷತ್ ವತಿಯಿಂದ ದೊಡ್ಡ ಹೋರಾಟ ರೂಪಿಸಲಾಗುವುದು . ಸರ್ಕಾರಕ್ಕೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.