ನಂಜನಗೂಡು : ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಇಮ್ಮಾವು ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕೆಂಪಿಸಿದ್ದನ ಹುಂಡಿ ಗ್ರಾಮದ ಜಮೀನನ್ನು ಕಳೆದುಕೊಂಡ ರೈತರು ಉದ್ಯೋಗಕ್ಕಾಗಿ ರಸ್ತೆ ತಡೆದು ಪ್ರತಿಭಟನೆ ಮಾಡಿದರು.

2012-2013ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಕೆಂಪಿಸಿದ್ದನಹುಂಡಿ ಗ್ರಾಮದ ರೈತನ ಜಮೀನುಗಳಾದ ಸರ್ವೆ ನಂಬರ್ 356/2, 359/2, 371/21 ಸಂಬಂಧಿಸಿದ ಭೂಮಿಗಳನ್ನು ವಸಪಡಿಸಿಕೊಂಡರು.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ನಿಯಮಗಳು ಪ್ರಕಾರ ಜಮೀನು ಕಳೆದುಕೊಂಡ ಕುಟುಂಬಗಳಿಗೆ ಉದ್ಯೋಗ ನೀಡಬೇಕೆಂಬ ನಿಯಮ ಇದೆ ಆದರೆ ಈ ಸರ್ವೇ ನಂಬರ್ ಗಳ ಜಮೀನುಗಳನ್ನು ರಸ್ತೆಯಾಗಿ ಮಾರುಪಡಿಸಿ ಅಭಿವೃದ್ಧಿಪಡಿಸಿದ್ದಾರೆ.

ಈ ರಸ್ತೆಯ ಮೂಲಕ ಅನುಕೂಲಪಡೆದುಕೊಳ್ಳುವ ಕಾರ್ಖಾನೆಗಳು ಉದ್ಯೋಗ ನೀಡಬೇಕು ಎಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯು ಪತ್ರದ ಮೂಲಕ ತಿಳಿಸಿದೆ, ಆದರೆ ಯುಬಿ ಕಂಪನಿಯು ಉದ್ಯೋಗ ನೀಡಲು ಮೀನಾಮೇಷ ಎನಿಸುತ್ತಿದೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೂ ಹಾಗೂ ಈ ಕ್ಷೇತ್ರವನ್ನು ಪ್ರತಿನಿಧಿಸುವ ಮುಖ್ಯಮಂತ್ರಿಗಳಿಗೂ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ.

ಇದರಿಂದ ಬೇಸತ್ತು ನಾವು ಪ್ರತಿಭಟನೆ ಮಾಡುತ್ತೇವೆ ನಮಗೆ ಜಮೀನು ಇಲ್ಲ ಉದ್ಯೋಗವಿಲ್ಲದೆ ಆತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಒಂದು ಜಮೀನನ್ನು ನೀಡಿ ಇಲ್ಲ ಉದ್ಯೋಗ ನೀಡಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ.

ಈ ಪ್ರತಿಭಟನೆಯಲ್ಲಿ ರೈತಮುಖಂಡರಾದ ಮಹದೇವ್, ಶಂಕರ್ ,ಮಂಜು, ರವಿ ,ರಮೇಶ್’, ಶಶಿಕುಮಾರ, ಮಹಾದೇವು,ನಾಗೇಗೌಡರು, ಶ್ರೀಕಂಠು,ಮರಮ್ಮ, ಸೇರಿದಂತೆ ಜಮೀನು ಕಳೆದುಕೊಂಡ ರೈತರು, ಸಂಘಟನೆ ಮುಖಂಡರು ಕೆಂಪಿಸಿದ್ದನ ಹುಂಡಿ ಗ್ರಾಮಸ್ಥರು ಪ್ರತಿಭಟನೆಯಲ್ಲಿವ ಪಾಲ್ಗೊಂಡಿದ್ದರು.