ಮೈಸೂರು : ಆರ್ ಎಸ್ ಎಸ್ ಬ್ಯಾನ್ ಮಾಡುತ್ತೇವೆ ಎಂದ ಪ್ರಿಯಾಂಕ ಖರ್ಗೆ ಹೇಳಿಕೆ ವಿಚಾರವಾಗಿ ಫೈಲ್ಸ್ ಪ್ರಿಯಾಂಕ, ಕೂಗು ಮಾರಿ ಖರ್ಗೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ವಾಗ್ದಾಳಿ ನಡೆಸಿದರು.

ಆರ್ ಎಸ್ ಎಸ್ ಬ್ಯಾನ್ ಮಾಡ್ತೀರಾ. ನೀವು ಯಾರಾ ಮಗಳು ಹೆಸರು ಇಟ್ಕೊಂಡಿದ್ದರಲ್ಲಾ ಅವರ ಕೈಯಲ್ಲೇ ಆಗಿಲ್ಲ. ಅವರು ಬ್ಯಾನ್ ಮಾಡಿದ್ರು ಅಧಿಕಾರ ಕಳೆದುಕೊಂಡ್ರು. ನೆಹರು ಕೂಡ ಬ್ಯಾನ್ ಮಾಡಿ ನಂತರ ಬ್ಯಾನ್ ವಾಪಸ್ ತೆಗೆದುಕೊಳ್ಳುವ ಅನಿವಾರ್ಯತೆ ಬಂತು. ನೆಹರು ಅವರ ಮರಿಮಗಳ ಹೆಸರು ಇಟ್ಕೊಂಡು ಏನು ಮಾಡಲು ಸಾಧ್ಯವಿಲ್ಲ.
ಹೆಸರಿನಲ್ಲೂ ಸ್ವಂತಂತೆ ಇಲ್ಲ.

ಐಟಿ ಬಿಟಿ ಸಚಿವರಾಗಿ ನಿಮ್ಮ ಸಾಧನೆ ಹೇಳಿ. ಬೇರೆ ರಾಜ್ಯಗಳಿಗೆ ಕಂಪನಿಗಳು ಯಾಕೆ ಹೋಗುತ್ತಿದೆ ಹೇಳಿ. ಸಂವಿಧಾನವನ್ನ ಆರ್ ಎಸ್ ಎಸ್ ರಕ್ಷಣೆ ಮಾಡುತ್ತಿದೆ. ಕಲ್ಬುರ್ಗಿಯಲ್ಲಿನ ಅವ್ಯವಸ್ಥೆ ನೋಡಿ ಮೊದಲು. ಒಂದು ಗಂಟೆ ಮಳೆ ಬಂದ್ರೆ ರಸ್ತೆಯಲ್ಲಿ ನೀರು ಹರಿಯುತ್ತಿದೆ. ನಿಮ್ಮ ಅಪ್ಪ ದೊಡ್ಡ ದೊಡ್ಡ ನಾಯಕರನ್ನ ಬಲಿ ಕೊಟ್ಟು ನಿಮ್ಮನ್ನ ಮಂತ್ರಿ ಮಾಡಿದ್ದಾರೆ. ಮೋದಿ ಆರ್ ಎಸ್ ಎಸ್ ಬಗ್ಗೆ ದಿನ ಮಾಡತನಾಡುತ್ತೀರಾ. ಇದೇ ರೀತಿ ಕೂಗು ಮಾರಿ ಮಾತನಾಡುತ್ತಿದ್ರೆ ನಿಮಗೆ ಒಳ್ಳೆಯದು ಆಗಲ್ಲ.

ನಿಮ್ಮಪ್ಪನ್ನೇ ಕಾಂಗ್ರೆಸ್ ಸಿಎಂ ಮಾಡಲಿಲ್ಲ. ಆರ್ ಎಸ್ ಎಸ್ ಬೈದ್ರೆ ಅಧಿಕಾರ ಸಿಗಲ್ಲ. ಪ್ರತಿ ನಿತ್ಯ ಇಲಾಖೆ ವಿಚಾರವನ್ನ ಮಾತನಾಡಿ. ಸಂತೋಷ ಲಾಡ್ ಸಹ ಮೇದಾವಿ ರೀತಿ ಮಾತನಾಡುತ್ತೀರಾ. ಮೋದಿ ಪಾಠ ಮಾಡುತ್ತೀರಾ. ಈ ದೇಶದ ಅರ್ಥ ವ್ಯವಸ್ಥೆಯನ್ನ ನಿರ್ವಹಣೆ ಮಾಡುವುದು ಸಂಡೂರು ಮೈನ್ಸ್ ನಿಂದ ಕದ್ದು ಮಾರಾಟ ಮಾಡಿದ್ರಲ್ಲಾ ಆ ರೀತಿ ನಾ. ಲಾಡ್ ಅವರೇ ಅರ್ಥ ವ್ಯವಸ್ಥೆಯ ಬಗ್ಗೆ ಕನಿಷ್ಟ ಜ್ಞಾನ ಇಲ್ಲ ನಿಮಗೆ.

ಒಂದು ಲೈಸೆನ್ಸ್ ನಲ್ಲಿ ನೂರಾರು ಲಾರಿ ಓಡಿಸಿದ್ರಲ್ಲಾ ಲಾಡ ಅವರೇ ಆ ರೀತಿ ಅಲ್ಲ ಅಧಿಕಾರ ನಡೆಸುವುದು. ಪ್ರತಿನಿತ್ಯ ಕಾ ಕಾ ಅಂತೀರಲ್ಲಾ ನಿಮ್ಮ ಜಿಲ್ಲೆಯಲ್ಲಿ ಕಾಗೆಗಳು ಇಲ್ವಾ. ನಿಮ್ಮ ಜಿಲ್ಲೆಯ ಐಎಸ್ಐ ಆಸ್ಪತ್ರೆಯ ಅವ್ಯವಸ್ಥೆಯನ್ನ ನೋಡಿದ್ದೀರಾ ಲಾಡ್ ಅವರೇ. ಮೈನಿಂಗ್ ದುಡ್ಡಿನಿಂದ 5 ಸಾವಿರ 10 ಸಾವಿರ ಕೊಟ್ಟು ತಾಳಿ ಕಟ್ಟಿಸಿದ್ದಾರೆ. ಬಹಿರಂಗ ಚರ್ಚೆಗೆ ಬನ್ನಿ ನಿಮ್ಮನ್ನ ಸೋಲಿಸುತ್ತೇನೆ.

ಪಾಯಿಂಟು ಪಾಯಿಂಟು ಚರ್ಚೆ ಮಾಡುತ್ತೇನೆ. ಯಾವ ಚಾಲನ್ ನಲ್ಲಿಯಾದರೂ ಸರಿ, ಅಥವಾ ಬಹಿರಂಗಿಯೂ ಸರಿ ಚರ್ಚೆಗೆ ಬನ್ನಿ. ಸಂತೋಷ್ ಲಾಡ್ ಅವರನ್ನ ಬಹಿರಂಗ ಚರ್ಚಗೆ ಮಾಜಿ ಸಂಸದ ಪ್ರತಾಪ ಸಿಂಹ ಆಹ್ವಾನಿಸಿದರು. ಪ್ರಿಯಾಂಕ್ ಖರ್ಗೆ ಅವರ ಖಾತೆಯ ಬಗ್ಗೆ ಒಂದು ಪ್ರೆಸ್ ಮೀಟ್ ಮಾಡಿ ಹೇಳಿ. ಏನು‌ ಕಡಿದು ಕಟ್ಟಾಕ್ಕಿದ್ದೀರ ನೀವು ಹೇಳಿ. ಇಬ್ಬರು ಬನ್ನಿ ನಾನು ಚರ್ಚೆಗೆ ಬರುತ್ತೇನೆ. ಬಹಿರಂಗ ಚರ್ಚೆಗೆ ಮಾಜಿ ಸಂಸದ ಪ್ರತಾಪ ಸಿಂಹ ಆಹ್ವಾನಿಸಿದರು.