ನಂಜನಗೂಡು: ನಂಜನಗೂಡಿನಲ್ಲಿ ಮತ್ತೆ ಖಾಸಗಿ ಫೈನಾನ್ಸ್ ದಬ್ಬಾಳಿಕೆ ಮುಂದುವರಿದಿದೆ. ವಸೂಲಿಗೆ ಬಂದ ಸಿಬ್ಬಂದಿಗಳು ಗೂಂಡಾ ವರ್ತನೆ ಪ್ರದರ್ಶಿಸಿದ್ದಾರೆ. ಹಣ ನೀಡದ ತಾಯಿ ಮಗನ ಮೇಲೆ ಹಲ್ಲೆ ಮಾಡಿ ದರ್ಪ ತೋರಿಸಿದ್ದಾರೆ.
ನಂಜನಗೂಡಿನ ಚಾಮಲಾಪುರದ ಹುಂಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಹಲ್ಲೆಗೆ ಒಳಗಾದ ಚೆನ್ನಜಮ್ಮ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಬೆಳಂ ಬೆಳಗ್ಗೆ ಹಣ ವಸೂಲಾತಿಗೆ ಬಂದ ಫಿನ್ ಕೇರ್ಸ್ ಖಾಸಗಿ ಫೈನಾನ್ಸ್ ಸಿಬ್ಬಂದಿ ವಿಧವಾ ಮಹಿಳೆ ಚೆನ್ನಾಜಮ್ಮಗೆ ಆವಾಜ್ ಹಾಕಿದ್ದಾನೆ.

ಕಳೆದ ವರ್ಷ 54 ಸಾವಿರ ರೂ.ಗಳನ್ನು ಫೈನಾನ್ಸ್ ನಿಂದ ಚೆನ್ನಾಜಮ್ಮ ಸಾಲ ಪಡೆದಿದ್ದರು. ಪ್ರತಿ ತಿಂಗಳು 2470 ರೂ.ಗಳನ್ನು ಪಾವತಿಸಬೇಕಿತ್ತು. ಈಗಾಗಲೇ 11 ಕಂತುಗಳನ್ನು ಕಟ್ಟಿದ್ದಾರೆ. ಉಳಿದ ಒಂಬತ್ತು ಕಂತುಗಳು ಬಾಕಿ ಇರುವ ಹಣವನ್ನು ವಸೂಲಾತಿಗೆ ಬಂದ ಫೈನಾನ್ಸ್ ಸಿಬ್ಬಂದಿಗೆ ಚೆನ್ನಜಮ್ಮ ಸಮಯಾವಕಾಶ ಕೇಳಿದ್ದಾರೆ. ಮಾತಿನ ಚಕಮಕಿ ನಡೆಸಿದ್ದಾರೆ.
ಈ ವೇಳೆ ಮಗ ಬಂದಾಗ ತಳ್ಳಾಟ ನೂಕಾಟ ನಡೆದಿದೆ. ಚೆನ್ನಾಜಮ್ಮ ಕೆಳಗೆ ಬಿದ್ದು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ಈಗಾಗಲೇ ಸರ್ಕಾರ ಬಲವಂತವಾಗಿ ಸಾಲ ವಸೂಲಿ ಮಾಡಬಾರದೆಂದು ಖಾಸಗಿ ಹಾಗೂ ಮೈಕ್ರೋ ಫೈನಾನ್ಸ್ ಗಳಿಗೆ ವಾರ್ನಿಂಗ್ ನೀಡಿದೆ. ಇದ್ಯಾವುದನ್ನೂ ಲೆಕ್ಕಿಸದ ಸಿಬ್ಬಂದಿಗಳು ಇಂದು ಸಾಲ ವಸೂತಿಗಾಗಿ ತಮ್ಮ ದರ್ಪ ತೋರಿಸಿದ್ದಾರೆ.

