ಮೈಸೂರು: ಪ್ರಿನ್ಸಸ್ ರಸ್ತೆ ಮರು ನಾಮಕರಣ ವಿಚಾರ ಮೈಸೂರಿನಲ್ಲಿ ಎಂಎಲ್ಸಿ ವಿಶ್ವನಾಥ್ ಸುದ್ದಿ ಗೋಷ್ಠಿ ನಡೆಸಿದರು. ಮೊದಲಿಗೆ ನಟ ಶಿವರಾಜ್ ಕುಮಾರ್ ಆರೋಗ್ಯ ಸುಧಾರಿಸಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದ ಆಶಿಸಿದ ಎಂಎಲ್ಸಿ ವಿಶ್ವನಾಥ್. ಇವತ್ತು ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಅದೋಗತಿ ಪರಿಸ್ಥಿತಿಯಲ್ಲಿದೆ.

ಸರ್ಕಾರದಲ್ಲಿ ಸರಿಯಾದ ಹಿಡಿತ ಇಲ್ಲ. ಹುಚ್ವುಚ್ಚಾಗಿ ಖರ್ಚಾ ಮಾಡುತ್ತಿದ್ದಾರೆ. ಆಡಳಿತದಲ್ಲಿ ಬಿಗಿ ಇಲ್ಲ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಐಪಿಎಸ್ ಅಧಿಕಾರಿ ರೂಪ ಅವರ ಜಗಳ ಬೀದಿ ರಂಪಾಟಕ್ಕೆ ಕ್ರಮ ತೆಗೆದುಕೊಳ್ಳಲಿಕ್ಕೆ ಆಗಿಲ್ಲ ನಿಮಗೆ. ಯಾವ ರೀತಿಯ ಆಡಳಿತ ಕೊಡ್ತಾ ಇದ್ದೀರಾ.?

ಪ್ರಸ್ತುತ ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ ಅಂತ. ಸಿಎಂ ಸಿದ್ದರಾಮಯ್ಯ ಒಂದು ಶ್ವೇತ ಪತ್ರ ಹೊರಡಿಸಬೇಕು. ರಾಜ್ಯದಲ್ಲಿರುವ ಆರ್ಥಿಕ ಪರಿಸ್ಥಿತಿಯನ್ನ ಬಹಿರಂಗ ಮಾಡಬೇಕು. ಸುದ್ದಿ ಗೋಷ್ಠಿಯಲ್ಲಿ ರಾಜ್ಯ ಸರ್ಕಾರ, ಸಿಎಂ ವಿರುದ್ಧ ಎಂಎಲ್ಸಿ ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.

ಚಳಿಗಾಲದ ಅಧಿವೇಶನವೂ ಕೂಡ ಕೆಟ್ಟದಾಗಿ ಮುಗಿದಿದೆ. ವಿಧಾನ ಮಂಡಲದ ಸಂಪ್ರದಾಯ ಮುರಿಯುವಂತಹ ಕೆಲಸವೇ ಆಗಿದೆ. ಸಭಾಪತಿ ಬಸವರಾಜ ಹೊರಟ್ಟಿ ಎಲ್ಲಾ ಮುಗಿದ ಅಧ್ಯಾಯ ಎಂದಿದ್ದಾರೆ. ಆದರೂ ಪೊಲೀಸರು ಮಹಜರು ಮಾಡುವುದು ಸರಿಯಲ್ಲ. ಸಿ ಟಿ ರವಿ ಬಂಧನ ಮಾಡಿದ್ದು ಕೂಡ ಸರಿಯಲ್ಲ.

ಬೆಳಗಾವಿ ಅಧಿವೇಶನ ಕೆಟ್ಟ ರೀತಿಯಲ್ಲಿ ಅಂತ್ಯವಾಯಿತು. ರಾಜ್ಯದ ‌ಆಡಳಿತ, ಅಭಿವೃದ್ಧಿ ಬಗ್ಗೆ ಯಾರು ಕೂಡ ತಲೆ‌ ಕೆಡಿಸಿಕೊಳ್ಳುತ್ತಿಲ್ಲ. ರಾಜ್ಯದ ಪರಿಸ್ಥಿತಿ ಅಧೋಗತಿಯಾಗುತ್ತಿದೆ. ಇನ್ನು ಮುಂದಾದರೂ ಈ ಬಗ್ಗೆ ಮುಖ್ಯಮಂತ್ರಿ ಗಮನ ಹರಿಸಬೇಕು. ಎಂಎಲ್ಸಿ., ಎಚ್ ವಿಶ್ವನಾಥ್ ಮೈಸೂರಿನಲ್ಲಿ ಹೇಳಿಕೆ ನೀಡಿದರು.