ಮೈಸೂರು : ಅಂಧಕಾಸುರ ವಧೆ ಮೆರವಣಿಗೆ ವೇಳೆ ಅರ್ಚಕ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ನಗರದಲ್ಲಿ ತಡರಾತ್ರಿ ಸಂಭವಿಸಿದೆ.

ಅಂಧಕಾಸುರನ ವಧೆ ಕಾರ್ಯಕ್ರಮದಲ್ಲಿ ತಾಂಡವೇಶ್ವರ ಉತ್ಸವ ಮೂರ್ತಿ ಮೆರವಣಿಗೆ ವೇಳೆ ಅರ್ಚಕ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಧನುರ್ಮಾಸದಲ್ಲಿ ನಡೆಯುವ ಅಂಧಕಾಸುರ ವಧೆ ಎಂಬ ಅದ್ಧೂರಿ ಪೂಜಾ ಮಹೋತ್ಸವ ನಡೆಯುತ್ತಿತ್ತು.

ನಂಜನಗೂಡಿನ ರಾಕ್ಷಸ ಮಂಟಪದ ಬಳಿ ಪೂಜಾ ಮಹೋತ್ಸವದ ಮೆರವಣಿಗೆಯ ವೇಳೆ ಅರ್ಚಕ ಕುಸಿದು ಬಿದ್ದಿದ್ದಾರೆ. ಅರ್ಚಕ ಶಂಕರ್ ಉಪಾಧ್ಯಾಯ(55) ಮೃತ ದುರ್ದೈವಿ. ಪ್ರತಿ ವರ್ಷ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಬಳಿ ನಡೆಯುವ ಅಂದಕಾಸುರ ವಧೆ ನಡೆಯುತ್ತದೆ.

ತಾಂಡವೇಶ್ವರ ಉತ್ಸವ ಮೂರ್ತಿ ಮೆರವಣಿಗೆ ನಂತರ ಅಂಧಕಾಸುರನ ವಧೆ ನಡೆಯುತ್ತದೆ. ಅಂಧಕಾಸುರ ವಧೆ ಕಾರ್ಯಕ್ರಮಕ್ಕೂ ಮುನ್ನ ಮೆರವಣಿಗೆಯಲ್ಲಿ ಅರ್ಚಕ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.