ತಿ. ನರಸೀಪುರ: ಎಚ್ ಸಿ ಮಹದೇವಪ್ಪ ರವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸಂಘಟನೆಗಳು ಮತ್ತು ವರುಣ ಕ್ಷೇತ್ರದ ದಲಿತ ಸಮುದಾಯದ ಮುಖಂಡರ ವತಿಯಿಂದ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿದರು.

ಮೊದಲ ಪಟ್ಟಿಯಲ್ಲಿ ಹೆಚ್ ಸಿ ಮಹದೇವಪ್ಪ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದೆ. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದಲಿತ ಸಮುದಾಯ ತಿರುಗಿ ಬಿದ್ದರು. ಸಿದ್ದರಾಮಯ್ಯ ವಿರುದ್ಧ DSS ಮುಖಂಡರು ಬಂಡಾಯ ಸಾರಿದರು. ಹಳೆ ಮೈಸೂರು ಭಾಗದಲ್ಲಿ ಮಹದೇವಪ್ಪರನ್ನ ಬಿಟ್ಟು ಸಿದ್ದರಾಮಯ್ಯ ಹಾಗೂ ಅವರ ಮಗ ರಾಜಕಾರಣ ಮಾಡಲು ಸಾಧ್ಯವಿಲ್ಲ.

ಸಿದ್ದರಾಮಯ್ಯ ಇಲ್ಲದೆ ಮಹದೇವಪ್ಪ ಕೂಡ ರಾಜಕಾರಣ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಮಹದೇವಪ್ಪ ನಡುವೆ ಒಡಕು ಉಂಟಾದ್ರೆ ಕಾಂಗ್ರೆಸ್ ಗೆ ಹೊಡೆತ ಗ್ಯಾರಂಟಿ. ಮೈಸೂರು ಚಾಮರಾಜನಗರ ಮಂಡ್ಯ ಕೊಡಗು ಹಾಸನ ಸೇರಿ 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಪೆಟ್ಟು ಬೀಳುತ್ತದೆ. ಇದನ್ನ ಕಾಂಗ್ರೆಸ್ ಹೈಕಮಾಂಡ್ ಗಮನಿಸಬೇಕು.

ಹೆಚ್ ಸಿ ಮಹದೇವಪ್ಪ ದಲಿತ ಚಳುವಳಿಯಿಂದ ರಾಜಕಾರಣಕ್ಕೆ ಬಂದವರು. ಈ ಸಮುದಾಯದ ಪರವಾಗಿ ಅನೇಕ ಸಂದರ್ಭದಲ್ಲಿ ಧ್ವನಿ ಎತ್ತಿದ್ದಾರೆ. ಮಹದೇವಪ್ಪಗೆ ಮಂತ್ರಿ ಸ್ಥಾನ ಕೊಡಲೇಬೇಕು.
ಇದೆ ತಿಂಗಳು 10ರಂದು ಸುತ್ತೂರಿನಲ್ಲಿ ವರುಣ ಕ್ಷೇತ್ರದ ದಲಿತರ ಸಭೆ ಕರೆದಿದ್ದೇವೆ. ವರುಣ ಕ್ಷೇತ್ರದ ಎಲ್ಲಾ ದಲಿತರು ಸಭೆಗೆ ಬರಲಿದ್ದಾರೆ. ಮಹದೇವಪ್ಪಗೆ ಮಂತ್ರಿ ಸ್ಥಾನ ಕೊಡಬೇಕೆಂದು ಹೈಕಮಾಂಡ್ ಗೆ ಹಕ್ಕೋತ್ತಾಯ ಮಾಡುತ್ತೇವೆ. ಮಹದೇವಪ್ಪರನ್ನ ಕಡೆಗಣಿಸಿದ್ರೆ ಕಾಂಗ್ರೆಸ್ ನಿರ್ನಾಮ ಗ್ಯಾರಂಟಿ ಎಂದು ಸುದ್ದಿಗೋಷ್ಠಿಯಲ್ಲಿ DSS ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಎಚ್ಚರಿಕೆ ನೀಡಿದರು.