ತಿ. ನರಸೀಪುರ: ಕರ್ನಾಟಕ ರಾಜ್ಯ ನವೋದಯ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸಂಘದ ವತಿಯಿಂದ ಕಾರ್ಮಿಕರ ಕಿಟ್ ವಿತರಣೆ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸುವ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಪಟ್ಟಣದ ಕಬಿನಿ ಅತಿಥಿಗೃಹದಲ್ಲಿ ಕರ್ನಾಟಕ ರಾಜ್ಯ ನವೋದಯ ಕಟ್ಟಡ ಮತ್ತು ಕೂಲಿ ಕೂಲಿ ಕಾರ್ಮಿಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಭುಗತಕಹಳ್ಳಿ ಕಾಂತರಾಜ್ ರವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಪೂರ್ವಭಾವಿ ಸಭೆ ಕುರಿತು ಅಧ್ಯಕ್ಷ ಕಾಂತರಾಜ್ ಮಾತನಾಡಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ವತಿಯಿಂದ ಹಲವು ಸೌಲಭ್ಯ ನೀಡಲಾಗುತ್ತಿದೆ. ಸರ್ಕಾರದ ಸೌಲಭ್ಯಗಳನ್ನ ಕಾರ್ಮಿಕರಿಗೆ ಕೊಡಿಸುವ ಕೆಲಸ ಆಗಬೇಕು. ಕಾರ್ಮಿಕರು ಆರೋಗ್ಯದ ಕಡೆ ಕೂಡ ಗಮನಹರಿಸಬೇಕು. ಈ ನಿಟ್ಟಿನಲ್ಲಿ ಕಾರ್ಮಿಕರ ಬೃಹತ್ ಆರೋಗ್ಯ ತಪಾಸಣೆ ಕೂಡ ಆಯೋಜನೆ ಮಾಡುತ್ತೇವೆ. ಕಾರ್ಮಿಕರ ಹಿತ ಕಾಯುವುದೇ ನಮ್ಮ ಉದ್ದೇಶ ಎಂದು ಹೇಳಿದರು.
ಈ ಸಂದರ್ಭ ಸೋಸಲೆ ಮಂಜುನಾಥ್, ಚೌಹಳ್ಳಿ ಮಹದೇವಸ್ವಾಮಿ, ಕೈಯಂಬಳ್ಳಿ ಬಸವಯ್ಯ, ಆಲಗೂಡು ಸಿದ್ದಪ್ಪ, ಹಿಟ್ಟುವಳ್ಳಿ ರಮೇಶ್, ಹರೀಶ್, ಕುಮಾರ್, ಮಹೇಶ್, ಕೃಷ್ಣ, ಶ್ರೀನಿವಾಸ್, ಶಿವಯ್ಯ, ಹದಿನಾರು ಮೂಳೆ ಶಿವಣ್ಣ, ಬೇವಿನಹಳ್ಳಿ ಲತಾ, ಮಹದೇವಮ್ಮ, ಗೀತಾ ಮತ್ತಿತರರು ಇದ್ದರು.

