ಮೈಸೂರು: ಮೈಸೂರಿನಲ್ಲಿ ಕಂಬಳಕ್ಕೆ ಸಿದ್ಧತೆ ಮುಂದುವರೆದಿದ್ದು, ಸಾತಗಳ್ಳಿ ಸಮೀಪ ಕಂಬಳಕ್ಕಾಗಿ ಜಾಗ ಗುರುತು ಮಾಡಲಾಗಿದೆ. ಗುರುತು ಮಾಡಿರುವ ಜಾಗದಲ್ಲಿ ಜೆಸಿಬಿ ಕೆಲಸ ಮುಂದುವರೆದಿದೆ.
ಕಂಬಳಕ್ಕೆ ಬೇಕಾದ ರೀತಿ ಭೂಮಿಯನ್ನು ಸಿಬ್ಬಂದಿಗಳು ಸಮತಟ್ಟು ಮಾಡುತ್ತಿದ್ದಾರೆ. ಜೂನ್ 27 ರಂದೇ ಕಂಬಳಕ್ಕಾಗಿ ಅನುಮತಿ ಪಡೆಯದೆ ಮರ ಕಡಿದವರ ವಿರುದ್ಧ ಅರಣ್ಯ ಇಲಾಖೆ FIR ದಾಖಲಿಸಿತ್ತು.
ದಸರಾದಲ್ಲಿ ಕಂಬಳ ಆಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಮೈಸೂರಿನಲ್ಲಿ ಪ್ರತಿಭಟನೆ ನಡೆಸಲು ಪರಿಸರವಾದಿಗಳ ನಿರ್ಧಾರ ಕೈಗೊಂಡಿದ್ದಾರೆ. ಜುಲೈ 18 ರಂದು ಪ್ರತಿಭಟನೆಗೆ ತೀರ್ಮಾನ ಮಾಡಲಾಗಿದೆ. ಕಂಬಳಕ್ಕಾಗಿ ಜಾಗ ಸಿದ್ಧಪಡಿಸುತ್ತಿರುವ ಜಾಗದಲ್ಲೇ ಪ್ರತಿಭಟನೆ ನಡೆಸಲಾಗುತ್ತದೆ. ಪ್ರತಿಭಟನೆಗೆ ರೈತ ಸಂಘಗಳು, ದಲಿತ ಸಂಘಟನೆಗಳು, ಪರಿಸರವಾದಿಗಳ ಬೆಂಬಲ ನೀಡಿದ್ದಾರೆ.

