ನಂಜನಗೂಡು: ಸ್ವಾಭಿಮಾನಿ ಚಕ್ರವರ್ತಿ ಮಾಜಿ ಸಂಸದರಾದ ದಿವಂಗತ ವಿ.ಶ್ರೀನಿವಾಸ ಪ್ರಸಾದ್ ರವರ ಹುಟ್ಟು ಹಬ್ಬದ ಅಂಗವಾಗಿ ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ಮಾಜಿ ಶಾಸಕ ಬಿ. ಹರ್ಷವರ್ಧನ್ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾಜಿ ಶಾಸಕ ಬಿ.ಹರ್ಷವರ್ಧನ್ ಮಾತನಾಡಿದರು. ಆ. 6 ರಂದು ಶ್ರೀನಿವಾಸ್ ಪ್ರಸಾದ್ ಸಾಹೇಬರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕಾಗಿದೆ.
ಒಂದು ದಿನದ ಕಾರ್ಯಕ್ರಮ ಆಗಿರಬಾರದು ತಾಲ್ಲೂಕಿನಲ್ಲಿರುವ ಬುಡಕಟ್ಟು ಜನಾಂಗ ವಾಸ ಮಾಡುವ ಹಾಡಿಗಳಲ್ಲೂ ಹುಟ್ಟುಹಬ್ಬವನ್ನು ಆಚರಣೆ ಮಾಡೋಣ, ಫ್ಲೆಕ್ಸ್ ಬ್ಯಾನರ್ ಗಳನ್ನು ಹಾಕಿಕೊಂಡರೆ ಜನರ ನಾಯಕರಾಗುವುದಿಲ್ಲ. ನಂಜನಗೂಡಿನ ರೈಲ್ವೆ ಮೇಲ್ಸೇತುವೆಗೆ ಶ್ರೀನಿವಾಸ್ ಪ್ರಸಾದ್ ರವರ ಹೆಸರನ್ನು ನಾಮಕರಣ ವಿಷಯದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಬೇಕು.
ನಂಜನಗೂಡು ಕ್ಷೇತ್ರವು ಚಾಮರಾಜನಗರದ ಲೋಕಸಭಾ ಕ್ಷೇತ್ರದ ಹೆಬ್ಬಾಗಿಲಾಗಿದೆ. ಶ್ರೀನಿವಾಸ ಪ್ರಸಾದ್ ಅವರ ಕೊಡುಗೆ ಜನರಿಗೆ ತಿಳಿದಿದೆ. ಶಾಸಕರ ಪ್ರಭುದ್ಧತೆಯನ್ನು ನೋಡಿದ್ದೇನೆ , ಮೇಲ್ಸೇತುವೆಗೆ ಶ್ರೀನಿವಾಸ್ ಪ್ರಸಾದ್ ರವರ ಹೆಸರಿಡುವ ನಿರ್ಧಾರಕ್ಕೆ ಸ್ವಾಗತಿಸುತ್ತೇನೆ. ಅವರು ಎಲ್ಲ ಸಮುದಾಯಕ್ಕೂ ಸೇರಿದವರಾಗಿದ್ದರು.
ಪಕ್ಷತೀತವಾಗಿ ಜಾತ್ಯತೀತವಾಗಿ ಜನನಾಯಕರಾಗಿ ಬೆಳೆದವರು. ಅವರು ಎಲ್ಲ ಸಮುದಾಯದವರ ಆಸ್ತಿಯಾಗಿದ್ದಾರೆ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಬೇಕಾಗಿದೆ. ಸ್ವಾಭಿಮಾನಿ ವಿ.ಶ್ರೀನಿವಾಸ್ ಪ್ರಸಾದ್ ಅಭಿಮಾನಿಗಳ ಒಕ್ಕೂಟದಿಂದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಚಿಕ್ಕರಂಗನಾಯಕ, ನಗರ ಬಿಜೆಪಿ ಅಧ್ಯಕ್ಷ ಸಿದ್ದರಾಜು, ಹೊರಳವಾಡಿ ಮಹೇಶ್, ಬದನವಾಳು ರಾಮು, ಚಂದ್ರು ಸೇರಿದಂತೆ ವಿ.ಶ್ರೀನಿವಾಸ ಪ್ರಸಾದ್ ಅಭಿಮಾನಿ ಬಳಗದ ಸದಸ್ಯರು ಹಾಜರಿದ್ದರು.

