ಮೈಸೂರು : ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಲೆಂದು ಅಯ್ಯಪ್ಪ ಮಾಲಾಧಾರಿಗಳಿಂದ ಪ್ರಾರ್ಥನೆ ಸಲ್ಲಿಸಲಾಯಿತು.
ಸಿಎಂ ಸಿದ್ದರಾಮಯ್ಯ ಭಾವಚಿತ್ರ ಹಿಡಿದು ಅಯ್ಯಪ್ಪ ಮೂಲಾಧಾರಿಗಳು ಶಬರಿಮಲೆ ಏರಿದರು. ನಂಜನಗೂಡು ತಾಲ್ಲೂಕಿನ ಮರಡಿಹುಂಡಿ ಗ್ರಾಮದ ಮೂಲಾಧಾರಿಗಳಿಂದ ಪ್ರಾರ್ಥನೆ ಸಲ್ಲಿಸಲಾಯಿತು.
ಮರಡಿಹುಂಡಿ ಗ್ರಾಮದಿಂದ ಕೇರಳಾದ ಶಬರಿಮಲೆಗೆ ಅಯ್ಯಪ್ಪ ಮೂಲಾಧಾರಿಗಳು ಹೋಗಿದ್ದಾರೆ. ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಸಿದ್ದು ಅಭಿಮಾನಿಗಳು ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸಲೆಂದು ಪೂಜೆ ಮಾಡಲಾಯಿತು.
ಅಯ್ಯಪ್ಪ ಮಾಲಾಧಾರಿಗಳಾಗಿ ಸಿದ್ದರಾಮಯ್ಯ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದರು. ಅಯ್ಯಪ್ಪ ಮಾಲಾಧಾರಿಗಳಾಗಿ ಶಬರಿಮಲೆ ಯಾತ್ರೆಗೆ ಸಿದ್ದರಾಮಯ್ಯ ಅಭಿಮಾನಿಗಳು ತೆರಳಿದರು. ಸಿದ್ದರಾಮಯ್ಯ ರಾಜಕೀಯ ಜೀವನ ಸುಗಮವಾಗಲಿ, ಅಡೆತಡೆಗಳು ದೂರವಾಗಲೆಂದು ಅಯ್ಯಪ್ಪನಲ್ಲಿ ಪ್ರಾರ್ಥನೆ ಸಲ್ಲಿಸಿದರು.

