ಮೈಸೂರು : ರಾಜ್ಯ ರಾಜಕಾರಣಕ್ಕೆ ಪ್ರತಾಪಸಿಂಹ ಎಂಟ್ರಿ‌ ವಿಚಾರವಾಗಿ ಮೈಸೂರಿನಲ್ಲಿ ಸಂಸದ ಯದುವೀರ್ ಒಡೆಯರ್ ಹೇಳಿಕೆ ನೀಡಿದ್ದಾರೆ. ಎಂಟ್ರಿ‌ ಹಾಗೂ ಎಕ್ಸಿಟ್ ನಾವ್ಯಾರು ತೀರ್ಮಾನ ಮಾಡಲ್ಲ. ಅದನ್ನ ನಿರ್ಧಾರ ಮಾಡುವುದು ರಾಜ್ಯ, ರಾಷ್ಟ್ರದ ವರಿಷ್ಠರು ಎಂದರು.

ಅವರು ಉತ್ತಮ‌ ಕೆಲಸ ಮಾಡಲಿ. ಎಲ್ಲರೂ ಒಗ್ಗೂಡಿ ಪಕ್ಷಕ್ಕಾಗಿ ಕೆಲಸ ಮಾಡುವುದು ಮೊದಲ ಆದ್ಯತೆ ಆಗಿರಲಿ. ಚಾಮರಾಜ ಕ್ಷೇತ್ರಕ್ಕೆ ಅಭ್ಯರ್ಥಿ ಆಗುವ ವಿಚಾರ ನಮಗೆಲ್ಲರಿಗೂ ಅಭಿವ್ಯಕ್ತಿ, ವಾಕ್ ಸ್ವಾತಂತ್ರ್ಯ ಇದೆ. ವರಿಷ್ಠರ ತೀರ್ಮಾನವೇ ಅಂತಿಮ ತೀರ್ಮಾನ ಎಂದರು.

ವರಿಷ್ಠರು ಯಾರಿಗೆ ಸೂಚಿಸ್ತಾರೆ ಅವರಿಗೆ ಬೆಂಬಲ. ಪಕ್ಷ‌ ಸೂಚಿಸಿದ ವ್ಯಕ್ತಿಗೆ ನಾವು ಬೆಂಬಲ‌ ಸೂಚಿಸುತ್ತೇವೆ. ನಮ್ಮ ಕೆಲಸದ ಆಧಾರದ ಮೇಲೆ ಟಿಕೆಟ್ ನೀಡುತ್ತಾರೆ. ಹಲವು ಆಕಾಂಕ್ಷಿಗಳಿರುತ್ತಾರೆ ಅಂತಿಮ ತೀರ್ಮಾನ ಮಾಡುವುದು ವರಿಷ್ಠರು. ಪಕ್ಷದ ಗೆಲುವಿಗಾಗಿ ಶ್ರಮಿಸುವುದು ಎಲ್ಲರ ಕರ್ತವ್ಯ ಎಂದರು.