Categories: ಮೈಸೂರು

ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಬದುಕುತ್ತಿರುವ ವೃದ್ಧ ಕುಟುಂಬ

ನಂಜನಗೂಡು : ಆಧುನಿಕ ಸಮಾಜದ ಅಂಗೈಯಲ್ಲಿ ಪ್ರಪಂಚವನ್ನು ನೋಡುವ ಮೊಬೈಲ್ ಯುಗದಲ್ಲಿಯೂ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ದೇಶದ ವಾಸಿಗಳ ಬದುಕು ಬದಲಾಗಿಲ್ಲ ಎಂಬುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಮೊಬ್ಬಳ್ಳಿ ಗ್ರಾಮದ ಗೇಟ್ ನಲ್ಲಿ ಬರೋಬರಿ 30 ವರ್ಷಗಳಿಂದ ವಾಸಿಸುವ ವೃದ್ಧ ಕುಟುಂಬಕ್ಕೆ ಕುಡಿಯಲು ನೀರಿಲ್ಲ ವಾಸಿಸಲು ಮನೆ ಇಲ್ಲ ಅಷ್ಟೇ ಏಕೆ ಸತ್ತರೆ ಕೊಡುವುದಕ್ಕೆ ಜಾಗವೇ ಇಲ್ಲ ಎಂದು ಕಣ್ಣೀರು ಇಡುತ್ತಿದ್ದಾರೆ.

 

ಅವರ ಕಣ್ಣೀರು ಒರೆಸುವ ಯಾವುದೇ ಜನಪ್ರತಿನಿಧಿ ಅಥವಾ ಅಧಿಕಾರಿಯಾಗಲಿ ಮುಂದಾಗದೆ ಇರುವುದು ದುರಂತದ ಸಂಗತಿ. ನಂಜನಗೂಡು ಹುಲ್ಲಹಳ್ಳಿ ಮುಖ್ಯರಸ್ತೆಯಲ್ಲಿರುವ ಮೊಬ್ಬಳ್ಳಿ ಗೇಟ್ ರಸ್ತೆಯ ಸಮೀಪವಿರುವ ಈ ಪುಟ್ಟ ಜೋಪಡಿಯಲ್ಲಿ ರಾಜಣ್ಣ ಎಂಬುವವರ ಕುಟುಂಬದ ಬರೋಬರಿ ಆರು ಮಂದಿ ವಾಸಿಸುತ್ತಿದ್ದಾರೆ. ಉಡುವ ಸೀರೆಯನ್ನು ಪರದೆಯಾಗಿ ಮಾಡಿಕೊಂಡು ಮಹಿಳೆಯರು ಸ್ನಾನ ಮಾಡುತ್ತಾರೆ. ಮನುಕುಲವನ್ನೇ ತಲೆತಗ್ಗಿಸುವಂತಹ ಹೀನಾಯ ಬದುಕು ಸಾಗಿಸುತ್ತಿರುವುದು ಕಣ್ಣಿಗೆ ಬಿದ್ದರೂ ಯಾರೊಬ್ಬರೂ ಕೂಡ ಇವರ ಬದುಕಿನ ಬದಲಾವಣೆಗೆ ಮುಂದಾಗಿಲ್ಲ.

 

ಮತದಾನದ ಸಂದರ್ಭದಲ್ಲಿ ಮತ ಹಾಕುತ್ತಾರೆ ಆಧಾರ್ ಕಾರ್ಡ್ ಜೊತೆಗೆ ಪಡಿತರ ಚೀಟಿಯು ಸಹ ಇದೆ ಆದರೆ ವಾಸದ ಮನೆ ಸೌಲಭ್ಯಕ್ಕಾಗಿ ಸಾಕಷ್ಟು ವರ್ಷಗಳಿಂದ ಅಂಗಲಾಚಿ ಬೇಡಿದರು ಸ್ಥಳೀಯ ಹೆಗ್ಗಡ ಹಳ್ಳಿ ಗ್ರಾಮ ಪಂಚಾಯಿತಿ ಮಾನವೀಯತೆ ದೃಷ್ಟಿಯಿಂದಾದರೂ ಕುಡಿಯಲು ನೀರನ್ನು ಸಹ ಕಲ್ಪಿಸಿಲ್ಲ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಬದುಕು ಸಾಗಿಸುವದರ ಬದಲಾಗಿ ಸರ್ಕಾರಿ ಅಧಿಕಾರಿಗಳೇ ನಮಗೆ ಒಂದು ತೊಟ್ಟು ವಿಷ ನೀಡಿದರೆ ಕಣ್ಮುಚ್ಚಿ ಮಲಗುತ್ತೇವೆ ಎನ್ನುತ್ತಾರೆ ನೊಂದ ವೃದ್ಧ ಕುಟುಂಬ.

ಮಾನವೀಯತೆ ಇಲ್ಲದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈಗಲಾದರೂ ಸ್ಪಂದಿಸಿ ವೃದ್ಧ ಕುಟುಂಬಕ್ಕೆ ಆಸರೆ ನೀಡುವವರೇ ಕಾದು ನೋಡಬೇಕಿದೆ.

Nisarga K

Recent Posts

ಮಲ್ಲಿಕಾರ್ಜುನ ಖರ್ಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪರಿಶೀಲಿಸಿದ ಚುನಾವಣಾ ಅಧಿಕಾರಿಗಳು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.

24 mins ago

ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಸಂಸ್ಕಾರ ಕಲಿಸಿ : ರವಿ ಶಾಸ್ತ್ರಿ

ಮಕ್ಕಳಿಗೆ ಆಸ್ತಿ ಮಾಡಿ ಇರಿಸುವುದರ ಬದಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಸಂಸ್ಕಾರವಂತರನ್ನಾಗಿ ಮಾಡಿದರೆ ಅದುವೇ ದೊಡ್ಡ ಆಸ್ತಿ ಎಂದು ಶ್ರೀ ಕೃಷ್ಣ…

47 mins ago

ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಲೋಕಾರ್ಪಣೆ

ಮಾಂಡ್ ಸೊಭಾಣ್ ಪ್ರಕಾಶನದ 22 ನೇ ಪುಸ್ತಕ ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಉಲ್ಲಾಳ ಸೋಮೇಶ್ವರದಲ್ಲಿರುವ…

51 mins ago

ʼಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಕರಾಳ ದಿನಗಳನ್ನ ಎದುರಿಸಬೇಕಾಗುತ್ತದೆʼ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಮುಂದಿನ ದಿನಗಳಲ್ಲಿ ದೇಶವು ಕರಾಳ ದಿನಗಳನ್ನು ನೋಡಬೇಕಾಗಬಹುದು ಎಂದು ಶಿವಸೇನಾ…

58 mins ago

ವಕೀಲ ಬಾಬಶೆಟ್ಟಿ ಹತ್ಯೆಗೆ 5 ಲಕ್ಷ ಸುಪಾರಿ: ಪ್ರಮುಖ ಆರೋಪಿ ಬಂಧನ

ಐದು ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು, ವಕೀಲನ ಹತ್ಯೆಗೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಬೀದರ್‌ ಜಿಲ್ಲಾ ಪೊಲೀಸರು…

1 hour ago

ದೇಶಾದ್ಯಂತ 24 ಗಂಟೆ ವಿದ್ಯುತ್‌ ಪೂರೈಕೆ ಸೇರಿ 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

2024ರ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದರೆ ಹತ್ತು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌…

1 hour ago