ಮೈಸೂರು: ನಂಜನಗೂಡಿನಲ್ಲಿ ರಾಜಕಾರಣ ಗರಿಗೆದರಿದ್ದು, ಎಂಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಹಿನ್ನೆಲೆ ಜೂನ್ 26 ರಂದು ನಿರ್ದೇಶಕರ ಚುನಾವಣೆ ನಡೆಯಲಿದೆ.

ಕೇರಳಗೆ ಸದಸ್ಯರು ಮತ್ತು ಕಾರ್ಯಕರ್ತರು ಜಾಲಿ ಟ್ರಿಪ್ ಹೊರಟಿದ್ದಾರೆ. ನಂಜನಗೂಡಿನ ದೇವಿರಮ್ಮನಹಳ್ಳಿ ಗೇಟ್ನಿಂದ ಪ್ರವಾಸ ಪ್ರಾರಂಭವಾಯಿತು. ಪ್ರವಾಸಕ್ಕೂ ಮುನ್ನ ಖಾಸಗಿ ಹೋಟೆಲ್ ನಲ್ಲಿ ಕಾಫಿ ಸವಿದು ಮೀಟಿಂಗ್ ನಡೆಯಿತು. ಮಾಜಿ ಶಾಸಕ ಕಳಲೆಕೇಶಮೂರ್ತಿ ಸೇರಿದಂತೆ ಇತರರು ಭಾಗಿಯಾಗಿದ್ದರು.

ಚಿನ್ನಂಬಳ್ಳಿ ರಾಜು ಅವರ ಗೆಲುವಿಗಾಗಿ ಕೇರಳ ಪ್ರವಾಸ ಕೈಗೊಂಡಿದ್ದಾರೆ. ಎಂಡಿಸಿಸಿ ಬ್ಯಾಂಕ್ ಆಡಳಿತ ನಿರ್ದೇಶಕ ಸ್ಥಾನಕ್ಕೆ ಚಿನ್ನಂಬಳ್ಳಿ ರಾಜು ಸ್ಪರ್ಧಿಸಲಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್ ಸಿ ಬಸವರಾಜು ಸೇರಿ 40ಕ್ಕೂ ಅಧಿಕ ಜನರಿಂದ ಕೇರಳ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ಗುಟ್ಟು ಸದಸ್ಯರು ಬಿಟ್ಟುಕೊಡಲಿಲ್ಲ.