ಮೈಸೂರು : ನದಿಯಲ್ಲಿ ಸಿಲುಕಿದ್ದವರ ರಕ್ಷಣೆಗೆ ಪೊಲೀಸ್ ಧಾವಿಸಿದ್ದು, ಬನ್ನೂರು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮನೋಜ್ ಕುಮಾರ್ ಸಮಯಪ್ರಜ್ಞೆಯಿಂದ ತಂದೆ ಮಗ ಬದುಕಿ ಬಂದ ಘಟನೆ ಮೈಸೂರು ಜಿಲ್ಲೆ ಬನ್ನೂರಿನ ಕಾವೇರಿ ನದಿಯಲ್ಲಿ ನಡೆದಿದೆ.
ಬನ್ನೂರಿನ ಕೃಷ್ಣೆಗೌಡ ಮತ್ತು ಪುತ್ರ ಪ್ರವೀಣ್ ಬದುಕಿ ಬಂದವರು. ಹಸು ಮೇಯಿಸಲು ನದಿ ಮದ್ಯೆ ತಂದೆ ಮಗ ತೆರಳಿದ್ದರು. ಈ ವೇಳೆ ಕೆಆರ್ ಎಸ್ ಡ್ಯಾಮ್ ನಿಂದ ನದಿಗೆ ನೀರು ಬಿಟ್ಟ ಪರಿಣಾಮ ನೀರಿನ ಸೆಳೆತಕ್ಕೆ ತಂದೆ ಮಗ ಸಿಲುಕಿದ್ದರು.
ಕೂಡಲೇ ಬನ್ನೂರು ಪೊಲೀಸರಿಗೆ ಸ್ಥಳೀಯರು ಮಾಹಿತಿ ತಿಳಿಸಿದರು. ಸ್ಥಳಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಮನೋಜ್ ಕುಮಾರ್ ಆಗಮಿಸಿದರು. ತೆಪ್ಪ ನಡೆಸುವವರ ಸಹಾಯದಿಂದ ನದಿಯಲ್ಲಿ ಸಿಲುಕಿದ್ದ ಅಪ್ಪ ಮಗನ ರಕ್ಷಣೆ ಮಾಡಲಾಯಿತು. ಪೊಲೀಸ್ ಇನ್ಸ್ಪೆಕ್ಟರ್ ಮನೋಜ್ ಕುಮಾರ್ ಸಮಯಪ್ರಜ್ಞೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

