ಮೈಸೂರು: ಬಲೂನ್ ತುಂಬುವ ಸಿಲಿಂಡರ್ ಬ್ಲಾಸ್ಟ್ ನಲ್ಲಿ ಮೃತಪಟ್ಟ ಸಲೀಂ ತಂಗಿದ್ದ ಲಾಡ್ಜ್ ನಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ.ಮೈಸೂರಿನ ಲಷ್ಕರ್ ಮೊಹಲ್ಲಾದ ರಸ್ತೆಯಲ್ಲಿರುವ ಷರೀಫ್ ಲಾಡ್ಜ್ ನಲ್ಲಿ ಸಲೀಂ ವಾಸ್ತವ್ಯವಿದ್ದ.

ಮೈಸೂರಿಗೆ ಬಂದಾಗ ಇದೆ ಲಾಡ್ಜ್ ನಿಂದ ವಾಸವಿದ್ದು ನಂತರ ಬಲೂನ್ ವ್ಯಾಪಾರಕ್ಕೆ ಹೋಗುತ್ತಿದ್ದ.15 ದಿನದಿಂದ ಇದೆ ಲಾಡ್ಜ್ ನಲ್ಲಿ ವಾಸ್ತವ್ಯವಿದ್ದ. ಇದೇ ಲಾಡ್ಜ್ ನಲ್ಲಿ ಅನೇಕ ಬಲೂನ್ ಮಾರಾಟಗಾರರು ತಂಗುತ್ತಿದ್ದರು.

ಮೃತ ಸಲೀಂ ಕೂಡ ಷರೀಫ್ ಲಾಡ್ಜ್ ನಲ್ಲಿ ತಂಗಿದ್ದ.ಸದ್ಯ ಲಾಡ್ಜ್ ಮುಂಭಾಗ ಬಲೂನ್ ಮಾರಾಟ ಮಾಡಲು ಬಂಸುತ್ತಿದ್ದ 3 ಸೈಕಲ್ ನಿಂತಿವೆ.ಸದ್ಯ ಲಾಡ್ಜ್ ನಾ ಸಿಸಿ ಟಿವಿ ಫೂಟೇಜ್ ಕಲೆ ಹಾಕಿರುವ ಪೊಲೀಸರು ಲಾಡ್ಜ್ ಸುತ್ತಲೂ ಸೆಕ್ಯೂರಿಟಿ ಕೊಟ್ಟಿದ್ದಾರೆ.