ನಂಜನಗೂಡು: ಇಮ್ಮಾವು ಗ್ರಾಮದ ಸಾಬರಹುಂಡಿ ಗ್ರಾಮದಲ್ಲಿ ಚಿತ್ರನಗರಿ ನಿರ್ಮಾಣ ಹಿನ್ನೆಲೆ ಪ್ರಶ್ನಿಸಲು ಹೋದ ರೈತನಿಗೆ ಪೊಲೀಸರಿಂದ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.
ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದ ಸಾಬರಹುಂಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಇಬ್ಬರು ಪೊಲೀಸರಿಂದ ರೈತನ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ.
ರೈತನ ಮೇಲೆ ಏಕಾಏಕಿ ಹಲ್ಲೆ ಮಾಡಿರುವುದು ಖಂಡನೀಯ. ಭಾರತೀಯ ಕ್ರಾಂತಿಕಾರಿ ಕಿಸನ್ ಸಂಘಟನೆಯ ರಾಜ್ಯ ಉಪಾಧ್ಯಕ್ಷ ನವೀದ್ ಪಾಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರಿಂದ ನಮಗೆ ರಕ್ಷಣೆ ಇಲ್ಲ. ಬೆದರಿಸುತ್ತಿದ್ದಾರೆ ನಮಗೆ ರಕ್ಷಣೆ ಕೊಡಿ ಎಂದು ಆಗ್ರಹಿಸಿದ್ದಾರೆ.

