ಮೈಸೂರು : ಪಿರಿಯಾಪಟ್ಟಣದಲ್ಲಿ ಹನಿಟ್ರ್ಯಾಪ್ ಕೃತ್ಯದಲ್ಲಿ ತೊಡಗಿದ್ದ ಪೊಲೀಸ್ ಅರೆಸ್ಟ್ ಆಗಿರುವ ಘಟನೆ ನಡೆದಿದೆ. ಸುಂದರ ಯುವತಿಯನ್ನ ಮುಂದೆ ಬಿಟ್ಟು ಹಣ ಉಳ್ಳವರ ಟ್ರ್ಯಾಪ್ ಮಾಡುತ್ತಿದ್ದ ಪೊಲೀಸ್ ನನ್ನು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಪೊಲೀಸರಿಂದಲೇ ಪೊಲೀಸ್ ಸಿಬ್ಬಂದಿಯನ್ನು ಅರೆಸ್ಟ್ ಮಾಡಲಾಗಿದೆ.
ಪೊಲೀಸ್ ಸಿಬ್ಬಂದಿಯ ಕೃತ್ಯದಿಂದ ಪೊಲೀಸ್ ಇಲಾಖೆ ಶಾಕ್ ಆಗಿದೆ. ಸುಂದರ ಯುವತಿ ಮುಂದೆ ಬಿಟ್ಟು ಕಂಪಲಾಪುರದ ದಿನೇಶ್ ಕುಮಾರ್ ಎಂಬರಿಗೆ ಹನಿಟ್ರ್ಯಾಪ್ ಮಾಡಿದ್ದಾರೆ. A1 ಮೂರ್ತಿ, A2ಪೊಲೀಸ್ ಶಿವಣ್ಣ ಹಾಗೂ ಇತರೆ ಮೂವರಿಂದ ಕೃತ್ಯ ಎಸಗಲಾಗಿದೆ. ಮನೆಗೆ ಕಾಫಿಗೆ ಯುವತಿ ದೀನೇಶ್ ಕುಮಾರ್ ನನು ಕರೆದಿದ್ದಳು. ಕಂಪಾಲಾಪುರದಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ ದಿನೇಶ್ನ ಬಟ್ಟೆ ಅಂಗಡಿಗೆ ಹೋಗಿ ಯುವತಿ ಪರಿಚಯ ಮಾಡಿಕೊಂಡಿದ್ದಳು.
ಬಳಿಕ ನಂಬರ್ ಪಡೆದು ವಾಟ್ಸಪ್ ಚಾಟಿಂಕ್ ಮಾಡಿದ್ದಾರೆ. ರಿಲೇಶನ್ಸ್ ಮನೆಯಲ್ಲಿ ಯಾರು ಇಲ್ಲ ಅಂತಾ ಯುವತಿ ಪೋನ್ ಮಾಡಿ ಕರೆದಿದ್ದಳು. ಯುವತಿ ಮಾತು ನಂಬಿ ಹೋದ ದಿನೇಶ್ ಕುಮಾರ್.
ಬಳಿಕ ರೂಮ್ ನಲ್ಲಿದ್ದ ಇಬ್ಬರು, ಬಳಿಕ ಏಕಾಏಕಿ ಎಂಟ್ರಿ ಕೊಟ್ಟಿದ್ದ ಪೊಲೀಸ್ ಪೇದೆ ಹಾಗೂ ಇತರರು. ಇಗ್ಗಾಮುಗ್ಗ ಥಳಿಸಿ ವಿಡಿಯೋ ಮಾಡಿ 10 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.
10 ಲಕ್ಷ ಹಣವನ್ನು ಸಹೋದರನ ಕೈಯಲ್ಲಿ ತರಿಸಿದ್ದ ದಿನೇಶ್. ಈ ವೇಳೆ ಅನುಮಾನ ಬಂದು ಸಹೋದರನಿಂದ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಸಿಬ್ಬಂದಿ ಬಂಧಿಸಿ ಇನ್ಸ್ ಪೆಕ್ಟರ್ ದೀಪಕ್ ಜೈಲಿಗಟ್ಟಿದ್ದಾರೆ.

