ಮೈಸೂರು : ಲಾಂಗ್ ಹಿಡಿದು ರೀಲ್ಸ್ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾಂಗ್ ಹಿಡಿದು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಯುವಕ ಹರಿ ಬಿಟ್ಟಿದ್ದನು. ಹುಣಸೂರು ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದರು.
ಹುಣಸೂರು ನಗರದ ಶಬ್ಬೀರ್ ನಗರದ ಕುರ್ಸಾನ್ ವಶಕ್ಕೆ ಪಡೆಯಲಾಗಿದೆ. ಲಾಂಗ್ ಬೀಸುತ್ತಾ ಕುರ್ಸಾನ್ ರೀಲ್ಸ್ ಮಾಡಿದ್ದನು. ರಸ್ತೆಯಲ್ಲಿ ವೀಲಿಂಗ್ ಮಾಡುತ್ತಾ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದನು. ಲಾಂಗ್ ಹಿಡಿದು ಫೋಸ್ ನೀಡಿ ರೀಲ್ಸ್ ಮಾಡುತ್ತಿದ್ದನು. ಜಾಲತಾಣದಲ್ಲಿ ಕುರ್ಸಾನ್ ಅಪ್ಲೋಡ್ ಮಾಡಿದ್ದನು. ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಶಕ್ಕೆ ಪಡೆದಿದ್ದಾರೆ.

