ಮೈಸೂರು: ಪಿತೃ ದೋಷ ಪರಿಹಾರಕ್ಕಾಗಿ ಹಾಗೂ ಮಹಾಲಯ ಪಿತೃ ಪಕ್ಷದ ಅಂಗವಾಗಿ  ಇರ್ವಿನ್ ರಸ್ತೆಯಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ  ದೇವಸ್ಥಾನದಲ್ಲಿ ಇಂದು ಸಾಮೂಹಿಕ ತಿಲತರ್ಪಣ, ಪಿಂಡಪ್ರದಾನ, ಪಿತೃ ಶಾಂತಿ ಹೋಮ ನೆರವೇರಿಸಲಾಯಿತು.

ಪಿತೃ ಪಕ್ಷದ ಅಂಗವಾಗಿ ಪಿತೃ ದೋಷ ಪರಿಹಾರ  ಮಾಡಲಾಯಿತು.ರುದ್ರ ಶಾಂತಿ ಪುರುಷ ಸೂಕ್ತ, ಶ್ರೀ ಸೂಕ್ತ ಹೋಮದಿಂದ ಪಿತೃ ದೋಷವುಳ್ಳ ಭಕ್ತರು ಪಿತೃ ಶಾಂತಿ ಹೋಮದಲ್ಲಿ ಭಾಗಿಯಾಗಿದ್ದರು.  ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಎಸ್ ಕೃಷ್ಣಮೂರ್ತಿ ನೇತೃತ್ವದಲ್ಲಿ ಸಾಮೂಹಿಕವಾಗಿ ಸಂಕಲ್ಪ  ಮಾಡಿಸಲಾಯಿತು.