ಮೈಸೂರು: ನಕಲಿ ಸಾಲರಿ ಸ್ಲಿಪ್ ಹಾಗೂ ಬ್ಯಾಂಕ್ ಸ್ಟೇಟ್ ಮೆಂಟ್ ಕೊಟ್ಟು ಎಸ್.ಬಿ.ಐ ಬ್ಯಾಂಕ್ ನಲ್ಲಿ  65.95 ಲಕ್ಷ ಸಾಲ ಪಡೆದು ವಂಚಿಸಿದ 7 ಮಂದಿ ವಿರುದ್ದ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.

ಎನ್.ಆರ್.ಮೊಹಲ್ಲ ಶಿವಾಜಿ ರೋಡ್ ನ ಎಸ್.ಬಿ.ಐ.ಶಾಖೆಯ ವ್ಯವಸ್ಥಾಪಕರಾದ ರಮ್ಯ ಎಂಬುವರು ಪ್ರಕರಣ ದಾಖಲಿಸಿದ್ದಾರೆ. ಒಂದೇ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನ ಅಲಂಕರಿಸಿರುವುದಾಗಿ ನಕಲಿ ದಾಖಲೆಗಳನ್ನ ಸಲ್ಲಿಸಿ ವಂಚಿಸಿದ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.

ಬೋಗಾದಿಯ ವಿಳಾಸ ನಮೂದಿಸಿ ವೆನ್ ಪ್ರಭಾ ಸಾಫ್ಟ್ ವೇರ್ ಸಲ್ಯೂಷನ್ ಸಂಸ್ಥೆಯಲ್ಲಿ ವಿವಿದ ಹುದ್ದೆ ಅಲಂಕರಿಸಿರುವುದಾಗಿ ನಕಲಿ ಸ್ಯಾಲರಿ ಸ್ಲಿಪ್ ಹಾಗೂ ಬ್ಯಾಂಕ್ ಸ್ಟೇಟ್ ಮೆಂಟ್ ಗಳನ್ನ ಸೃಷ್ಟಿಸಿ ಎಸ್.ಬಿ.ಐ.ಗೆ ನೀಡಿದ್ದಾರೆ.

ನಾಗೇಶ್ ಎಂಬುವರ ಹೆಸರಲ್ಲಿ 9.40 ಲಕ್ಷ,ನವೀನ್ ಕುಮಾರ್ ಹೆಸರಲ್ಲಿ 9.25 ಲಕ್ಷ ಸಾಲ,ಸಣ್ಣಪ್ಪ ಎಂಬುವರ ಹೆಸರಲ್ಲಿ 10 ಲಕ್ಷ ಸಾಲ,ಮಂಜಣ್ಣ ಎಂಬುವರ ಹೆಸರಲ್ಲಿ 9.55 ಲಕ್ಷ ಸಾಲ, ದೀಪಾ ಎಂಬುವರ ಹೆಸರಲ್ಲಿ 9.25 ಲಕ್ಷ ಸಾಲ, ಶ್ರೀನಿವಾಸ್ ಎಂಬುವರ ಹೆಸರಲ್ಲಿ 9.20 ಲಕ್ಷ ಸಾಲ ಹಾಗೂ ಮಂಜುನಾಥ್ ಎಂಬುವರ ಹೆಸರಲ್ಲಿ 9.30 ಲಕ್ಷ ಸಾಲ ಮಂಜೂರಾಗಿದೆ.

2022 ರಲ್ಲಿ ಸಾಲ ಪಡೆದ ಆರೋಪಿಗಳು ಕಂತು ಪಾವತಿಸಿಲ್ಲ. ಪರಿಶೀಲನೆ ನಡೆಸಿದಾಗ 7 ಮಂದಿಯೂ ನಕಲಿ ದಾಖಲೆಗಳನ್ನ ನೀಡಿ ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ. ಬ್ಯಾಂಕ್ ಗೆ  7 ಆರೋಪಿಗಳಿಂದ 65.95 ಲಕ್ಷ ವಂಚನೆಯಾಗಿದೆ.ಈ ಸಂಬಂಧ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.