ಮೈಸೂರು : ಮಿಸನ್ ಆಸ್ಪತ್ರೆ ಖಾಯಂ ನೌಕರರಿಗೆ ಕಳೆದ ಒಂಭತ್ತು ತಿಂಗಳಿಂದ ಆಡಳಿತ ಮಂಡಳಿ ಸಂಬಳ ನೀಡಲಿಲ್ಲ. ಮಿಸನ್ ಆಸ್ಪತ್ರೆ ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆಯಾಗಿದೆ.

ಸಂಬಳ ನೀಡದ ಕಾರಣ ಆಡಳಿತಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಆಸ್ಪತ್ರೆ ಆಡಳಿತಧಿಕಾರಿ ರೆವರೆಂಡ್ ಎಲಿಜ್ ಕುಮಾರ್ ವಿರುದ್ಧ ಧಿಕ್ಕಾರ ಕೂಗಿ ಘೋಷಣೆ ಹಾಕಿದರು.

ಆಸ್ಪತ್ರೆ ಆಡಳಿತಧಿಕಾರಿ ಮತ್ತು ನೌಕರರ ನಡುವೆ ಮಾತಿನ ಚಕಮಕಿ ನಡೆಯಿತು. ಒಂಭತ್ತು ತಿಂಗಳ ಬಾಕಿ ಸಂಬಳ ಬಿಡುಗಡೆ ಮಾಡುವಂತೆ ನೌಕರರು ಒತ್ತಾಯಿಸಿದರು.