ಮೈಸೂರು: ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿದ್ದ ಕೃಷಿ ಮೇಳವನ್ನು ಪದ್ಮಶ್ರೀ ಪುರಸ್ಕೃತ ಹಾಗೂ ಸಿರಿಧಾನ್ಯ ತಜ್ಞ ಡಾ. ಖಾದರ್ ವಲ್ಲಿ ವೀಕ್ಷಿಸಿದರು.
ಸಾವಯವ ಹಾಗೂ ಸಿರಿಧಾನ್ಯಗಳ ಉತ್ಪನ್ನಗಳ ಆಯೋಜನೆ ಬಗ್ಗೆ ಡಾ. ಖಾದರ್ ವಲ್ಲಿ ಮೆಚ್ಚುಗೆ ಸೂಚಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಆಹಾರ ಪದ್ದತಿ ವ್ಯಾಪಾರೀಕರಣವಾಗಿ, ಪರಾಕಾಷ್ಠೆ ತಲಪಿರುವುದರಿಂದ ನಮಗೆ ಪೌಷ್ಠಿಕ ಮತ್ತು ಆರೋಗ್ಯಪೂರ್ಣ ಆಹಾರ ಕ್ರಮ ದೂರವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ನಮ್ಮ ಪೂರ್ವಜನರು ಪ್ರತಿಪಾದಿಸಿದ ಸಿರಿಧಾನ್ಯಗಳ ಮತ್ತೆ ಬಳಕೆಗೆ ತರಬೇಕೆಂದು ಹೇಳಿದರು.

