ಮೈಸೂರು: ಸಚಿವ ಸಂಪುಟ ವಿಚಾರದಲ್ಲಿ ನಮ್ಮ ತಂದೆಯೆ ಯಾವುದೇ ಅಸಮಾಧನಾವಿಲ್ಲ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ತಂದೆ 14 ಜನಕ್ಕೆ ಸಚಿವ ಸ್ಥಾನಕ್ಕೆ ಶಿಫಾರಸ್ಸು ಮಾಡಿದ್ದರು.ಅದರಲ್ಲಿ ಬಹುತೇಕರಿಗೆ ಸಚಿವ ಸ್ಥಾನ ಸಿಕ್ಕಿದೆ.
ಸಿದ್ದರಾಮಯ್ಯ ಎರಡು ಹಂತದ ಪಟ್ಟಿಯಲ್ಲೂ ಮಹದೇವಪ್ಪ ಹೆಸರಿತ್ತು. ಮಹದೇವಪ್ಪ ಅವರಿಗೆ ಸಚಿವ ಸ್ಥಾನ ಕೊಡಿ ಎಂದು ನಮ್ಮ ತಂದೆ ಕೇಳಿದ್ದರು.ಹೈ ಕಮಾಂಡ್ ಮಹದೇವಪ್ಪ ಅವರಿಗೆ ಸಚಿವ ಸ್ಥಾನ ಕೊಡಲು ಒಪ್ಪಿಲ್ಲ.ಜಮೀರ್ ಅಹಮದ್ ಅವರಿಗೂ ನಮ್ಮ ತಂದೆ ಸಚಿವ ಸ್ಥಾನ ಕೇಳಿರಲಿಲ್ಲ. ಗಾಯತ್ರಿ ಅವರು ಸಚಿವರಾಗದ ವಿಚಾರದಲ್ಲಿ ನಮ್ಮ ತಂದೆ ಪಾತ್ರ ಇಲ್ಲ. ತನ್ವೀರ್ ಸೇಠ್ ಗೆ ಸಚಿವ ಸ್ಥಾನ ತಪ್ಪಿದರ ಹಿಂದೆ ನಮ್ಮ ತಂದೆ ಪಾತ್ರ ಇಲ್ಲ.ಈ ಸಚಿವ ಸಂಪುಟದ ಬಗ್ಗೆ ನಮ್ಮ ತಂದೆಗೆ ಯಾವ ಅಸಮಾಧಾನ ಇಲ್ಲ.
ಆಗಸ್ಟ್ 3 ನಮ್ಮ ತಂದೆಯ ಹುಟ್ಟು ಹಬ್ಬ. ಹೀಗಾಗಿ ಅವರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬರಲಿಲ್ಲ. ಕೆಲವೊಂದು ಬಾರಿ ಕೆಲವು ಜಾತಿಗಳಿಗೆ ತಪ್ಪುತ್ತದೆ. ಅದನ್ನು ಬೇರೆ ರೀತಿಯಲ್ಲಿ ಪಕ್ಷ ಸರಿದೂಗಿಸುತ್ತದೆ. ನಮ್ಮ ತಂದೆ ಅರ್ಧಕ್ಕೆ ಸಿಎಂ ಸ್ಥಾನದಿಂದ ಕೆಳಗಿಳದ ಕಾರಣ ನನಗೆ ಸಚಿವ ಸ್ಥಾನ ನೀಡಲಾಗಿದೆ.ನನಗೆ ಸಚಿವ ಸ್ಥಾನ ನೀಡದೆ ಇದ್ರೆ ಸಹಜವಾಗಿ ನಮ್ಮ ಸಮುದಾಯಕ್ಕೆ ಬೇಜಾರಾಗುತ್ತಿತ್ತು. ನನಗೆ ಸಚಿವ ಸ್ಥಾನ ನೀಡಿದರಲ್ಲಿ ಯಾವ ತಪ್ಪು ಇಲ್ಲ.ನಾನು ಖುದ್ದು ಮಹದೇವಪ್ಪ ಹಾಗೂ ತನ್ವೀರ್ ಸೇಠ್ ಅವರನ್ನ ಭೇಟಿ ಮಾಡುತ್ತೇನೆ. ಅವರೆಲ್ಲಾ ನಮ್ಮ ಪಕ್ಷದ ಹಿರಿಯರು. ಅವರನ್ನ ಭೇಟಿಯಾಗಿ ಮಾತನಾಡುತ್ತೇನೆ ಎಂದರು.

