ಮೈಸೂರು: ಓಟಿಪಿ ತಂದ ಎಡವಟ್ಟಿನಿಂದ ಆರ್ ಬಿ ಐ ಉದ್ಯೋಗಿಯೊಬ್ಬರು 98 ಸಾವಿರ ಹಣ ಕಳೆದುಕೊಂಡಿದ್ದಾರೆ.ತೊಣಂಗಿ ಶ್ರೀನು ಎಂಬುವರೇ ಹಣ ಕಳೆದುಕೊಂಡವರು.
ತೊಣಂಗಿ ಶ್ರೀನು ರವರ ವಾಟ್ಸಾಪ್ ಗೆ ಕೆಲವು ಮೆಸೇಜ್ ಗಳು ಬಂದಿವೆ. ಇವುಗಳನ್ನ ಚೆಕ್ ಮಾಡುವಾಗ ಓಟಿಪಿ ಬಳಸಿ ಆಪ್ ಡೌನ್ ಲೋಡ್ ಮಾಡಿದ್ದಾರೆ.
ಇದನ್ನೇ ಬಳಸಿಕೊಂಡ ವಂಚಕರು ಫ್ಲಿಪ್ ಕಾರ್ಟ್ ಹೆಸರಿನಲ್ಲಿ 98690/- ರೂ ಡ್ರಾ ಆಗಿದೆ. ತೊಣಂಗಿ ಶ್ರೀನು ರವರು ನನ್ನ ಗಮನಕ್ಕೆ ಬಾರದೆ ಹಣ ಡ್ರಾ ಆಗಿದೆ ಎಂದು ಆರೋಪಿಸಿ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

