ಮೈಸೂರು: ಒಂದೇ ಭೂಮಿಗೆ ಇಬ್ಬರ ನಡುವೆ ಕಿತ್ತಾಟ ನಡೆದಿದ್ದು, ವನ್ಯಜೀವಿ ತಜ್ಞ ಕೃಪಾಕರ್, ರೈತ ಕುಟುಂಬದ ನಡುವೆ ಜಟಾಪಟಿ‌ ನಡೆದಿರುವ ಘಟನೆ ಮೈಸೂರು ತಾಲೂಕಿನ ದೊಡ್ಡ ಮಾರಗೌಡನಹಳ್ಳಿಯಲ್ಲಿ ನಡೆದಿದೆ.

ಸರ್ವೆ ನಂ. 121 ನಾಲ್ಕು ಎಕರೆ ಜಮೀನು ವ್ಯಾಜ್ಯ ನಡೆದಿದೆ. ಮೂಲ ರೈತ ಕುಟುಂಬ ಹಾಗೂ ಖರೀದಿದಾರ ಕೃಪಾಕರ್ ನಡುವೆ ಜಮೀನು ಹಕ್ಕಿಗಾಗಿ ಫೈಟ್ ನಡೆದಿದೆ. ರೈತರನ್ನ ವಶಕ್ಕೆ ಪಡೆದು ಜಮೀನು ಹಸ್ತಾಂತರ ಮಾಡಲಾಗಿದೆ. ಜಮೀನನ ಸ್ವಾಧೀನ ಹೊಂದಿರೋ ಮೂಲ ರೈತರ ಕುಟುಂಬದಿಂದ ಜಮೀನು ಸ್ವಾಧೀನಕ್ಕೆ ಕೃಪಾಕರ್ ಮುಂದಾಗಿದ್ದಾರೆ.

 2006 ರಲ್ಲಿ ಸರ್ವೆ ನಂ.121 ರಲ್ಲಿ ನಾಲ್ಕು ಎಕರೆ ಜಮೀನನ್ನು  ಮಹೇಶ್ ಶ್ಯಾಮಣ್ಣ ಖರೀದಿ ಮಾಡಿದ್ದಾರೆ. ಮಹೇಶ್ ಶ್ಯಾಮಣ್ಣ ಕೃಪಾಕರ್ ಸಹೋದರ. 1951 ರಲ್ಲಿ ಹರಾಜು ಮೂಲಕ ಸಣ್ಣೇಗೌಡ ಕುಟುಂಬಕ್ಕೆ  ಜಮೀನು ಬಂದಿದೆ.

 ಸಣ್ಣೇಗೌಡ ಮೃತರಾದ ಬಳಿಕ ಕೃಷ್ಣೇಗೌಡ, ಸಣ್ಣಮ್ಮ, ಯಶೋಧಮ್ಮ, ರವಿಕುಮಾರ್ ಜೆ  ಹೆಸ್ರಿಗೆ ಪೌತಿ ಖಾತೆಗೆ ಬಂದಿದೆ. ಜಮೀನಿಲ್ಲಿ ಅಡಿಕೆ ತೆಂಗು  ಮೂಲ ರೈತರು ಹಾಕಿದ್ದಾರೆ. ತಡರಾತ್ರಿ ಮೈಸೂರು ತಹಶೀಲ್ದಾರ್ ಮಹೇಶ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದೆ. 

 ರೈತರ ಕುಟುಂಬವನ್ನ ಪೊಲೀಸರ ವಶಕ್ಕೆ ನೀಡಿ ಜಮೀನು ಹಸ್ತಾಂತರ ಮಾಡಲಾಗಿದೆ. ರೈತರಿಗೆ ಅನ್ಯಾಯವಾಗ್ತಿದೆ ತಹಶಿಲ್ದಾರ್ ಕಾನೂನು ಉಲ್ಲಂಘನೆ ಮಾಡಿದ್ದಾರೆ ಅಂತಾ ರೈತ ಕುಟುಂಬ ಆರೋಪ ಮಾಡಿದೆ.