ಮೈಸೂರು: NIE- IT ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ತನ್ನ ನೂರಾರು ಶಿಕ್ಷಕರಿಗೆ ಕೊಕ್ ನೀಡಿದೆ. ಸಂಸ್ಥೆಗೆ ಇಂದು ಪ್ರವೇಶ ಅವಕಾಶ ನೀಡದ ಹಿನ್ನಲೆ ಪ್ರವೇಶ ಧ್ವಾರದ ಬಳಿ ನಿಂತು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

teaching & non teaching staff ಗಳನ್ನ 100ಕ್ಕೂ ಹೆಚ್ಚು ಮಂದಿಯನ್ನ ಕೆಲಸದಿಂದ ತೆಗೆದು ಹಾಕಲಾಗಿದೆ. ಶಿಕ್ಷಣ ಸಂಸ್ಥೆಯನ್ನ merge ಮಾಡುವ ನೆಪ ಹೇಳಿ 18ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ನೂರಾರು ಮಂದಿಯನ್ನ voluntary separation scheme ಮೂಲಕ ಅವೈಜ್ಞಾನಿಕವಾಗಿ ತೆಗೆದುಹಾಕಿದ್ದಾರೆ. ಕೆಲವರಿಗೆ ಪರಿಹಾರ ಕೊಟ್ಟು ಕಳುಹಿಸಿದ್ದಾರೆಂದು ಹೇಳಲಾಗಿದೆ. ನೊಂದವರು ಬೀದಿಗಿಳಿದು ಪ್ರತಿಭಟನೆ ನಡೆಸಲು ಸಜ್ಜಾಗುತ್ತಿದ್ದಾರೆ.