ಮೈಸೂರು: ಸಮಾಜ ಸೇವಕ ಹಾಗೂ ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಡಾ.ಮಹೇಂದ್ರ ಸಿಂಗ್ ಕಾಳಪ್ಪರವರ ಜನ್ಮ ದಿನವನ್ನು ಮೈಸೂರು ನಗರದ ಪಿಂಜರೋಪೋಲ್ ನಲ್ಲಿ ಗೋಪಾಲಕರಿಗೆ ನಿರ್ಮಿಸಿದ್ದ ನೂತನ ಗೋ ಪಾಲಕರ ಸದನವನ್ನು ಉದ್ಘಾಟಿಸುವ ಮೂಲಕ ಆಚರಿಸಲಾಯಿತು.
ಪಿಂಜರಾಪೋಲ್ ನಲ್ಲಿ ಸುಮಾರು ನಾಲ್ಕು ಸಾವಿರದ ಎಂಟು ನೂರು ಗೋವುಗಳನ್ನು ಸಂರಕ್ಷಣೆ ಮಾಡಲಾಗುತ್ತಿದ್ದು, ಅವುಗಳ ಪಾಲನೆಗೆ ಸುಮಾರು 22 ಮನೆಗಳನ್ನು ದಾನಿಗಳಿಂದ ನೆರವು ಪಡೆದು ನಿರ್ಮಿಸಲಾಗಿದೆ. ಇದರಲ್ಲಿ ಸದಾ ಜನಪರ ಕಾಳಜಿಯುಳ್ಳ ಸಮಾಜ ಸೇವಕ ಮಹೇದ್ರ ಸಿಂಗ್ ಕಾಳಪ್ಪ ಮೊದಲಿಗರಾಗಿದ್ದು, ಇಂದು ಅವರ ಸ್ವಂತ ಹಣದಿಂದ ನಿರ್ಮಿಸಿದ್ದ ಗೋ ಪಾಲಕರ ಮನೆಯನ್ನು ಉದ್ಘಾಟಿಸಲಾಗಿದೆ.
ಬಳಿಕ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಧನ ಸಹಾಯವನ್ನು ಸಹ ಮಾಡಿದ್ದಾರೆ. ಈ ವೇಳೆ ಡಾ.ಮಹೇಂದ್ರ ಸಿಂಗ್ ಕಾಳಪ್ಪರವರ ತಾಯಿ ಗೌರಿದೇವಿ ಹಾಗೂ ಪತ್ನಿ ಸಂತೋಷ್ ಕುಮಾರಿ ಸಹೋದರ ರಾಜೇಶ್ ಕುಮಾರ್, ಮುಖಂಡರುಗಳಾದ ಬನ್ನಿಮಂಟಪ ರಾಜಣ್ಣ, ಸಂತೋಷ್ ತುಮಕೂರು ಸೇರಿದಂತೆ ಹಲವರು ಭಾಗವಹಿಸಿದ್ದರು.

