ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿನಲ್ಲಿ ದೊಡ್ಡಜಾತ್ರೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ತಾಲ್ಲೂಕು ಆಡಳಿತ ಭಕ್ತರಿಗಾಗಿ ಸಕಲ ವ್ಯವಸ್ಥೆ ಕಲ್ಪಿಸಲು ಸನ್ನದ್ದರಾಗುತ್ತಿದ್ದಾರೆ. ಆದರೆ ಕಪಿಲೆಯ ಒಡಲು ಬರಿದಾಗಿ ತ್ಯಾಜ್ಯಗಳಿಂದ ತುಂಬಿ ಕಲುಷಿತವಾಗಿ ಭಕ್ತರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಕಪಿಲಾ ನದಿಯಲ್ಲಿ ವಾಮಾಚಾರ ನಡೆಯುತ್ತಿರುವ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದೆ. ಕಪಿಲಾ ನದಿಯ ಸ್ನಾನಘಟ್ಟದಲ್ಲಿ ಮಡಿಕೆ, ಕುಡಿಕೆ, ನಿಂಬೆ ಹಣ್ಣಿನಿಂದ ವಾಮಾಚಾರ ಮಾಡಿರುವುದು ಕಂಡುಬಂದಿದ್ದು, ಭಕ್ತರು ಬೆಚ್ಚಿ ಬೀಳುತ್ತಿದ್ದಾರೆ.
ಇದೇ ಏ. 9 ರಂದು ನಂಜನಗೂಡು ದೊಡ್ಡಜಾತ್ರೆ ನಡೆಯಲಿದೆ. ಲಕ್ಷಾಂತರ ಭಕ್ತರು ದೊಡ್ಡಜಾತ್ರೆಗೆ ಆಗಮಿಸಲಿದ್ದಾರೆ. ಆದ್ರೆ ಪುಣ್ಯಸ್ನಾನ ಮಾಡಬೇಕಿದ್ದ ಕಪಿಲೆಯ ಒಡಲು ಬರಿದಾಗಿದೆ . ನದಿಯಲ್ಲಿ ಕಸದ ತ್ಯಾಜ್ಯ ತಾಂಡವವಾಡುತ್ತಿದೆ.
ನದಿಯ ದಂಡೆಯಲ್ಲಿ ಕಸದ ರಾಶಿ ರಾಶಿ, ಬಟ್ಟೆ ಗಳು, ಮಡಿಕೆ ಕುಡಿಕೆಗಳು ರಾರಾಜಿಸುತ್ತಿವೆ. ಇನ್ನೇನು ಕೆಲವೇ ದಿನಗಳಲ್ಲಿ ದೊಡ್ಡಜಾತ್ರೆ ಆರಂಭವಾಗಲಿದ್ದು ಇನ್ನಾದರೂ ತಾಲ್ಲೂಕು ಆಡಳಿತ ಸ್ವಚ್ಛತೆಗೆ ಆಧ್ಯತೆ ನೀಡಲಿ. ಭಕ್ತರ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ.

