News Karnataka Kannada
Monday, April 29 2024
ಮೈಸೂರು

ನಂಜನಗೂಡು: ಮಾಜಿ ಸಿಎಂ ಸಿದ್ದರಾಮಯ್ಯ ಆದಾಯದ ಮಾಹಿತಿ ನಿಮಗೆ ಗೊತ್ತೆ

Do you know the income of former CM Siddaramaiah?
Photo Credit : By Author

ನಂಜನಗೂಡು: ಅಪಾರ ಜನಸ್ತೋಮದೊಂದಿಗೆ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಸ್ಫರ್ಧಿಸಲು ನಾಮಪತ್ರ ಸಲ್ಲಿಸಿದರು.

ಇದರ ಜೊತೆಗೆ ಆದಾಯದ ಮಾಹಿತಿ ನೀಡಿರುವ ಸಿದ್ದರಾಮಯ್ಯ ಅವರು, ಕಳೆದ ಐದು ವರ್ಷಗಳ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ಒಟ್ಟು ಸಂಪತ್ತಿನ ಜತಗೆ ಸಾಲವೂ ದುಪ್ಪಟ್ಟಾಗಿದೆ. 2018ರಲ್ಲಿ ಅವರ ಕುಟುಂಬದ ಸಂಪತ್ತು 20.36 ಕೋಟಿ ರೂ. ಇತ್ತು. 2023ರ ಹೊತ್ತಿಗೆ 51.13 ಕೋಟಿ ರೂ.ಗೆ (ಪತ್ನಿಯ ಸಂಪತ್ತು ಸೇರಿ) ಹೆಚ್ಚಳವಾಗಿದೆ. ಜತೆಗೆ ಸಾಲವೂ ಹೆಚ್ಚಾಗಿರುವುದು ವಿಶೇಷ.

2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಾಮಪತ್ರ ಸಲ್ಲಿಸುವಾಗ ಸಿದ್ದರಾಮಯ್ಯ ಕುಟುಂಬ ಒಟ್ಟು 20.36 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿದ್ದರು.

ಈ ಬಾರಿ ಸಿದ್ದರಾಮಯ್ಯ 19,01,80,209 ರೂ. ಮೌಲ್ಯದ ಆಸ್ತಿ ಘೋಷಣೆ ಮಾಡಿಕೊಂಡಿರುವ ಅವರು, 6,84,17,250 ರೂ. ಸಾಲ ಇರುವುದಾಗಿಯೂ ಘೋಷಣೆ ಮಾಡಿದ್ದಾರೆ. ಒಟ್ಟಾರೆ ಆಸ್ತಿ ಪೈಕಿ 9,58,08,209 ರೂ. ಮೌಲ್ಯದ ಚರಾಸ್ತಿ ಹಾಗೂ 9,43,72,000 ರೂ. ಮೌಲ್ಯದ ಸ್ಥಿರಾಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಅವರು ಒಟ್ಟು 6.84 ಕೋಟಿ ಸಾಲ ತೋರಿಸಿದ್ದು, ಕೆ.ಜೆ.ಜಾರ್ಜ್ ಎಂಬುವರ ಬಳಿಯೇ 4 ಕೋಟಿ ರೂ. ಸಾಲಪಡೆದಿರುವ ಬಗ್ಗೆ ಘೋಷಣೆ ಮಾಡಿದ್ದಾರೆ.

ತಮ್ಮ ಪತ್ನಿ ಪಾರ್ವತಿ ಅವರ ಹೆಸರಲ್ಲಿ 32,12,77,206 ರೂ. ಮೌಲ್ಯದ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಈ ಪೈಕಿ 11,26,92,288 ರೂ. ಮೌಲ್ಯದ ಚರಾಸ್ತಿ ಹಾಗೂ 20,85,84,918 ರೂ. ಮೌಲ್ಯದ ಸ್ಥಿರಾಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಪತ್ನಿ ಹೆಸರಲ್ಲೂ 16,24,99,139 ರೂ. ಸಾಲ ಇರುವುದಾಗಿ ಘೋಷಿಸಿದ್ದಾರೆ.

ಸಿದ್ದರಾಮಯ್ಯ ಕೈಯಲ್ಲಿರುವ 1.5ಲಕ್ಷ ರೂ.ನಗದು, ಪತ್ನಿ ಪಾರ್ವತಿ ಅವರ ಬಳಿ 1.26 ಲಕ್ಷ ರೂ. ನಗದು ಇದೆ. ಸಿದ್ದರಾಮಯ್ಯ ವಿರುದ್ಧ 13 ಪ್ರಕರಣಗಳು ದಾಖಲಾಗಿದ್ದು, 4 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೆ, 5 ಪ್ರಕರಣಗಳು ಸಿಐಡಿ ತನಿಖೆಗೆ ಒಳಪಟ್ಟಿವೆ ಎಂದು ಘೋಷಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು