ತಿ. ನರಸೀಪುರ: ನಿಕಟ ಪೂರ್ವ ಅಧ್ಯಕ್ಷ ಸಿ. ನಿಂಗರಾಜು ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.

ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಗರತ್ನಮ್ಮ ರನ್ನ ಹೊರತುಪಡಿಸಿ ಯಾರು ನಾಮಪತ್ರ ಸಲ್ಲಿಸದ ಕಾರಣ ನಾಗರತ್ನಮ್ಮ ರವರು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ನೀರಾವರಿ ಇಲಾಖೆಯ ಮಂಜುನಾಥ್ ಘೋಷಣೆ ಮಾಡಿದರು.

ಈ ಸಂದರ್ಭ ಉಪಾಧ್ಯಕ್ಷೆ ಚಿನ್ನತಾಯಮ್ಮ, ಭಾಗ್ಯ, ಶಿವರಾಜು,ನಾಗರಾಜ್, ಸಿ. ನಿಂಗರಾಜು, ಚಂದ್ರಮ್ಮ, ಜ್ಯೋತಿ, ಗಿರಿಜಮ್ಮ, ಮಹೇಶ.ಎಂ, ರಾಜೇಶ್ವರಿ, ಮಂಗಳಮ್ಮ, ನಾಗರಾಜು ಪಿ, ಸರೋಜಮ್ಮ, ಮಹಾದೇವಸ್ವಾಮಿ ಬಿ, ಆರ್ ಗಿರೀಶ್, ಕಾಮಿನಿ, ಮುಖಂಡರುಗಳಾದ ಮಲ್ಲಣ್ಣ, ಮಂಟಲಿಂಗಪ್ಪ, ಡಿ.ಎಲ್ ಮಹದೇವಪ್ಪ, ಏಳುಮಲೆ ಮಂಜು,ವಸಂತ್ ಸೇರಿದಂತೆ ಮತ್ತಿತರರು ಇದ್ದರು.