News Karnataka Kannada
Sunday, April 28 2024
ಮೈಸೂರು

ಡಿಜಿಟಲ್​ ಯೋಗ ಕೇಂದ್ರವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

Modi to attend Deepotsav in Ayodhya
Photo Credit :

ಮೈಸೂರು: ಮೈಸೂರಿನಲ್ಲಿ ಡಿಜಿಟಲ್​ ಯೋಗ ಕೇಂದ್ರವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ವಸ್ತುಪ್ರದರ್ಶನ ಸಂಗ್ರಹಾಲಯದಲ್ಲಿ ನಿರ್ಮಿಸಲಾಗಿರುವ ಡಿಜಿಟಲ್​ ಯೋಗ ಕೇಂದ್ರವನ್ನು ವೀಕ್ಷಿಸಿ, ಅತ್ಯದ್ಭುತವಾಗಿದೆ ಎಂದು ಬಣ್ಣಿಸಿದರು. ರಾಜ್ಯಪಾಲ ಥಾವರ್​ಚಂದ್​ ಗೆಲ್ಹೋಟ್​, ಸಿಎಂ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದರು.

ಅರಮನೆಗೆ ತೆರಳಿರುವ ಪ್ರಧಾನಿ ಮೋದಿ ಅವರು ಮೈಸೂರು ರಾಜವಂಶಸ್ಥರ ಜತೆ ಮಾತುಕತೆ ನಡೆಸುವ ಜತೆಗೆ, ಅವರ ನಿವಾಸದಲ್ಲಿಯೇ ಉಪಹಾರ ಸೇವಿಸಲಿದ್ದಾರೆ. ಪ್ರಧಾನಮಂತ್ರಿ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಆಯುಷ್​ ಸಚಿವರು ಭಾಗವಹಿಸಲಿದ್ದಾರೆ. ಬೆ.9.30ರ ನಂತರ ಮೈಸೂರು ವಿಮಾನ ನಿಲ್ದಾಣದಿಂದ ಕೇರಳಕ್ಕೆ ಪ್ರಯಾಣ ಮಾಡಲಿದ್ದಾರೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮಾನವೀಯತೆಗಾಗಿ ಯೋಗ, ಜೀವನ ಶೈಲಿ, ಆರೋಗ್ಯಯುತ ಬದುಕು, ವಿಶ್ರಾಂತಿ, ವ್ಯಾಯಾಮ ಹೀಗೆ ಹಲವು ಮಾಹಿತಿ, ಹಾಗೆಯೇ ಮಹಾವೀರ, ಗೌತಮ ಬುದ್ಧ, ಆದಿ ಶಂಕರಾಚಾರ್ಯ, ಮಹರ್ಷಿ ಪತಂಜಲಿ ಇತರರ ಕೊಡುಗೆ ಹೀಗೆ ಆಯುಷ್ ಯೋಗಕ್ಕೆ ಸಂಬಂಧಿಸಿದಂತೆ ಡಿಜಿಟಲ್ ಮಳಿಗೆಗಳು ಗಮನ ಸೆಳೆಯುತ್ತಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು