Categories: ಮೈಸೂರು

ಮೈಸೂರು: ಕಾಂಗ್ರೆಸ್ ಗೆಲುವಿನಲ್ಲಿ ಮಹಿಳಾ ಮತದಾರರ ಪಾತ್ರವಿದೆ- ರೇಖಾ ಶ್ರೀನಿವಾಸ್

ಮೈಸೂರು: ಕಾಂಗ್ರೆಸ್ ಗೆಲುವಿನಲ್ಲಿ ಮಹಿಳಾ ಮತದಾರರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಖಾ ಶ್ರೀನಿವಾಸ್ ಹೇಳಿದ್ದಾರೆ.

ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ ಕಾರ್ಡ್‌ನಲ್ಲಿ ಪ್ರತಿ ಮನೆಯ ಮಹಿಳೆಗೆ ರೂ 2,000 ನೀಡಲಾಗುವುದು ಎಂಬ ಭರವಸೆ ಮಹಿಳಾ ಮತದಾರರು ಪಕ್ಷವನ್ನು ಬೆಂಬಲಿಸಲು ಕಾರಣವಾಗಿದೆ. ಗ್ಯಾರಂಟಿ ಕಾರ್ಡ್‌ನಲ್ಲಿ ನೀಡಿರುವ ಭರವಸೆಗಳ ಬಗ್ಗೆ ಬಿಟ್ಟಿ ಭಾಗ್ಯ ಎಂದು ಬಿಜೆಪಿಯವರು ಟೀಕೆ ಮಾಡುತ್ತಿರುವುದು ದುರದೃಷ್ಟಕರ ಸಂಗತಿ. ಬಹುರಾಷ್ಟ್ರೀಯ ಕಂಪೆನಿಗಳ, ಉದ್ಯಮಿಗಳ ಸಾವಿರಾರು ಕೋಟಿ ಸಾಲ ಮನ್ನಾ ಮಾಡಿದಾಗ, ದೊಡ್ಡ ಮೊತ್ತದ ರಿಯಾಯಿತಿ ನೀಡಿದಾಗ ಟೀಕಿಸದ ಬಿಜೆಪಿ ಮುಖಂಡರು ಬಡವರಿಗೆ ಸೌಲಭ್ಯ ಕೊಡಲು ಹೊರಟರೆ ವ್ಯಂಗ್ಯವಾಗಿ ಮಾತನಾಡುತ್ತಿರುವುದು ಆ ಪಕ್ಷದ ಬೌದ್ಧಿಕ ದಿವಾಳಿತನದ ಸಂಕೇತವಾಗಿದೆ ಎಂದು ಟೀಕಿಸಿದರು.

ನಗರವ್ಯಾಪ್ತಿಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತದಾರರು ಬೆಂಬಲಿಸಿದ್ದಾರೆ. ಹಿಂದಿನ ಸಂದರ್ಭಗಳಲ್ಲಿ ನಗರ ಪ್ರದೇಶದಲ್ಲಿ ಬಿಜೆಪಿಗೆ ಬೆಂಬಲವಿತ್ತು. ಹಲವು ಅಪಪ್ರಚಾರಗಳ ನಡುವೆಯೇ ಜನರು ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟು ಮತ ಚಲಾಯಿಸಿದ್ದಾರೆ’ ಎಂದು ಮಹಿಳಾ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಖಾ ಶ್ರೀನಿವಾಸ್ ಹೇಳಿದರು.

Gayathri SG

Recent Posts

ಅಶ್ಲೀಲ ವಿಡಿಯೋ​; ಇಂದು ಮಂಗಳೂರು ಏರ್​ಪೋರ್ಟ್​ಗೆ ಪ್ರಜ್ವಲ್ ಆಗಮನ ಸಾಧ್ಯತೆ

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದೆ. ಹೆಚ್​ಡಿ ರೇವಣ್ಣ ಬಂಧನ ಬೆನ್ನಲ್ಲೇ ಪ್ರಜ್ವಲ್ ಬೇಟೆ ಕೂಡ…

1 min ago

ಬೀದರ್‌ನಲ್ಲಿ ಪರಿಶಿಷ್ಟ ಮುಖಂಡ ಬಿಜೆಪಿ ಸೇರ್ಪಡೆ

ಔರಾದ್‌ ತಾಲ್ಲೂಕಿನ ವಡಗಾಂವ್‌ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಪರಿಶಿಷ್ಟ ಜಾತಿಯ ಮುಖಂಡ ಬಾಬುರಾವ ಅಡಕೆ ಅವರು ನಗರದಲ್ಲಿ ಶನಿವಾರ ಬಿಜೆಪಿ…

16 mins ago

ಬೀದರ್‌ನಲ್ಲಿ ಸರಳ ವಿಶ್ವಗುರು ಬಸವಣ್ಣ ಜಯಂತಿ ಆಚರಣೆ

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಮೇ 10ರಂದು ಸರಳ ಹಾಗೂ ಸಾಂಕೇತಿಕವಾಗಿ…

28 mins ago

ಗುಮ್ಮಟ ನಗರಿಯಲ್ಲಿ ಕಣ್ಮನ ಸೆಳೆಯುವ ಶಿವಗಿರಿ

ಸಾಮಾನ್ಯವಾಗಿ ಶಿವನ ಮೂರ್ತಿಯನ್ನು ಎಲ್ಲ ಕಡೆ ಸ್ಥಾಪಿಸುತ್ತಾರೆ. ಆದರೆ ವಿಜಯಪುರದಲ್ಲಿನ ಶಿವಮೂರ್ತಿ ಒಂಚೂರು ವಿಭಿನ್ನವಾಗಿದ್ದು, ಇದೊಂದು ಪ್ರವಾಸಿ ಸ್ಥಳವಾಗಿದೆ

38 mins ago

ಉಮೇಶ ವಂದಾಲ ನೇತೃತ್ವದಲ್ಲಿ ಮನೆಮನೆ ಪ್ರಚಾರ

ಲೋಕಸಭಾ ಚುನಾವಣೆ ಹಿನ್ನೆಲೆ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ರಮೇಶ ಜಿಗಜಿಣಗಿ ಪರವಾಗಿ ನಗರದ ವಾರ್ಡ್ ಸಂಖ್ಯೆ 3…

51 mins ago

ಅಸ್ಸಾಂ, ಗೋವಾದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ

ಏತನ್ಮಧ್ಯೆ, ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಹೊಸ ಬೆಲೆಗಳನ್ನು ಬಿಡುಗಡೆ ಮಾಡಿವೆ. ದೇಶದ ಕೆಲವು ರಾಜ್ಯಗಳು ಮತ್ತು…

1 hour ago