News Karnataka Kannada
Monday, April 29 2024
ಮೈಸೂರು

ಮೈಸೂರು: ನಾರಾಯಣ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸ್ಲೆಡ್ ಸೇವೆ ಆರಂಭ

State-of-the-art sled service launched at Narayana Hospital
Photo Credit : By Author

ಮೈಸೂರು: ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ ಫ್ರೆಸೆನಿಯಸ್ ವೈದ್ಯಕೀಯ ಆರೈಕೆ ಡಯಾಲಿಸಿಸ್ ಯಂತ್ರವನ್ನು    ಅಳವಡಿಸುವ  ಮೂಲಕ ಡಯಾಲಿಸಿಸ್ ಸೇವೆಯನ್ನು ಉನ್ನತೀಕರಿಸಿದ್ದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ನೆಫ್ರಾಲಜಿ ವಿಭಾಗಕ್ಕೆ ಈ ಐದು ಯಂತ್ರಗಳನ್ನು ಅಳವಡಿಸಲಾಗಿದ್ದು  ಗುಣಮಟ್ಟದ ಚಿಕಿತ್ಸೆ ಆರಂಭವಾಗಿದೆ.

ತೀವ್ರ ನಿಗಾ ಘಟಕದಲ್ಲಿ ಮೂತ್ರಪಿಂಡ ವೈಫಲ್ಯದ ರೋಗಿಗಳಿಗೆ ನೀಡುವ ಡಯಾಲಿಸಿಸ್ ಚಿಕಿತ್ಸೆಯಲ್ಲಿ ಸಸ್ಟೈನ್ಡ್ ಲೊ-ಎಫಿಷಿಯನ್ಸಿ ಡಯಾಲಿಸಿಸ್ (ಎಸ್ ಎಲ್ ಇ ಡಿ) ಜನಪ್ರಿಯವಾಗುತ್ತಿರುವ ಚಿಕಿತ್ಸ ವಿಧವಾನಗಿದೆ. ಸಸ್ಟೈನ್ಡ್ ಲೊ-ಎಫಿಷಿಯನ್ಸಿ ಡಯಾಲಿಸಿಸ್ (ಎಸ್ ಎಲ್ ಇ ಡಿ) ಸಾಂಪ್ರದಾಯಿಕ ಇಂಟರ್ಮಿಟೆಂಟ್  ಹಿಮೋಡಯಾಲಿಸಿಸ್ (ಇ ಹೆಚ್ ಡಿ) ಮತ್ತು ಕಂಟಿನ್ಯೂಸ್ ರೆನಲ್ ರಿಪ್ಲೇಸೆಮೆಂಟ್ ಥೆರಪಿ (ಸಿ ಆರ್ ಆರ್ ಟಿ) ನಡುವಿನ ಮಧ್ಯಂತರ ಹೈಬ್ರಿಡ್ ಡಯಾಲಿಸಿಸ್ ವಿಧಾನವಾಗಿದೆ.

ಸ್ಲೆಡ್ ಚಿಕಿತ್ಸಾ ವಿಧಾನದ  ಪ್ರಯೋಜನಗಳೆಂದರೆ ಸಣ್ಣ ದ್ರಾವಣಗಳ ಸಮರ್ಥ ತೆರವು, ಉತ್ತಮ ಹಿಮೋಡೈನಮಿಕ್ ಸಹಿಷ್ಣುತೆ. ರೋಗಿಗಳಿಗೆ ಸುಲಭವಾಗಿ ಹೊಂದಿಕೊಳ್ಳುವ ಈ ವಿಧಾನದಿಂದ ರೋಗಿಗಳು ಆಸ್ಪತ್ರೆಯಲ್ಲಿ ಕಳೆಯಬೇಕಾದ ಸಾಮ್ಯ ಹಾಗೂ ಚಿಕಿತ್ಸೆಗೆ ತಗುಲುವ ವೆಚ್ಚ ಎರೆಡು ಸಹ ಕಡಿಮೆಯಾಗಲಿವೆ. ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಡಯಾಲಿಸಿಸ್‌ ಮಾಡಿಸಿಕೊಳ್ಳುವ ರೋಗಿಗಳಿಗೆ ಉಚಿತ ಸಾರಿಗೆ  ಸೇವೆಗಳನ್ನು ಒದಗಿಸುತ್ತಿರುವುದು ವಿಶೇಷವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು