Categories: ಮೈಸೂರು

ಮೈಸೂರು: ಮಂಚೇಗೌಡನಕೊಪ್ಪಲಿನ ಶ್ರೀರಾಮಮಂದಿರ ಉದ್ಘಾಟನೆ

ಮೈಸೂರು: ಮಂಚೇಗೌಡನಕೊಪ್ಪಲಿನ ಕ್ಷೇಮಾಭಿವೃದ್ಧಿ ಸಂಘವು ಆಯೋಜಿಸಿದ್ದ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ಹಾಗೂ ನವಗ್ರಹ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಶ್ರೀರಾಮಮಂದಿರ ಪೂಜಾ ಮಹೋತ್ಸವ, ಶ್ರೀ ವರಸಿದ್ಧಿ ವಿನಾಯಕ ದೇವರ ಗೋಪುರ ಪೂಜಾ ಮಹೋತ್ಸವಕ್ಕೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಚಾಲನೆ ನೀಡಿದರು.

ನಗರದ ಮಂಚೇಗೌಡನ ಕೊಪ್ಪಲಿನಲ್ಲಿ ಆಯೋಜಿಸಿದ್ದ ಮಹೋತ್ಸವದಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಮೀಜಿಗಳು ಧಾರ್ಮಿಕ ಕಾರ್ಯವನ್ನು ನೇರವೇರಿಸಿಕೊಟ್ಟರು. ಬಳಿಕ ಮಾತನಾಡಿದ ಅವರು, ನಮ್ಮಲ್ಲಿರುವ ದೈವತ್ವ ಗುಣದ ಮೂಲಕ ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕು. ಪಡೆದ ಶಿಕ್ಷಣ ಉನ್ನತ ಮಟ್ಟಕ್ಕೆ ಕೊಂಡೊಯ್ದರೆ, ಧರ್ಮ ನಮ್ಮನ್ನು ಸಂಸ್ಕಾರವಂತರನ್ನಾಗಿಸುತ್ತದೆ ಎಂದು ಹೇಳಿದರು.

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥಸ್ವಾಮೀಜಿ, ಶಾಸಕರಾದ ಎಲ್‌.ನಾಗೇಂದ್ರ, ವಿಧಾನ ಪರಿಷತ್‌ ಮಾಜಿ ಸದಸ್ಯ ಡಿ.ಮಾದೇಗೌಡ, ಮಾಜಿ ವಾಸು, ಕಾಂಗ್ರೆಸ್‌ ಮುಖಂಡ ಕೊಪ್ಪಲು ಹರೀಶ್‌ಗೌಡ, ಕವೀಶ್‌ಗೌಡ, ನಗರಪಾಲಿಕೆ ಸದಸ್ಯರಾದ ಕೆ.ವಿ.ಶ್ರೀಧರ್‌, ಪ್ರೇಮಾಶಂಕರೇಗೌಡ, ಮಂಚೇಗೌಡನಕೊಪ್ಪಲಿನ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ರಾಮಚಂದ್ರು, ಉಪಾಧ್ಯಕ್ಷ ಸಿ.ಮಂಜುನಾಥ್‌, ಕಾರ್ಯದರ್ಶಿ ರವಿ ಮಂಚೇಗೌಡನಕೊಪ್ಪಲು ಇನ್ನಿತರರು ಉಪಸ್ಥಿತರಿದ್ದರು.

Gayathri SG

Recent Posts

ಚುನಾವಣಾ ಕರ್ತವ್ಯದಲ್ಲಿದ್ದ ಬಿಎಸ್‌ಎಫ್ ಯೋಧನಿಂದ ಲೈಂಗಿಕ ಕಿರುಕುಳ

ಪಶ್ಚಿಮ ಬಂಗಾಳದ ಉಲುಬೇರಿಯಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಬಿಎಸ್‌ಎಫ್ ಯೋಧನನ್ನು ಲೈಂಗಿಕ ಕಿರುಕುಳ ಆರೋಪ ಬಂದ ಹಿನ್ನೆಲೆಯಲ್ಲಿ…

5 mins ago

ಮೇಯುತ್ತಿದ್ದ ಕುರಿಗಳ ಮೇಲೆ ನಾಯಿಗಳ ದಾಳಿ : ಹತ್ತು ಕುರಿಗಳು ಬಲಿ

ಜಮೀನಿನಲ್ಲಿ ಮೇಯುತ್ತಿದ್ದ ಕುರಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ ನಾಯಿಗಳ ಹಿಂಡು ಹತ್ತು ಕುರಿಗಳನ್ನ ಕೊಂದುಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ…

6 mins ago

ಹೆಲಿಕಾಪ್ಟರ್ ದುರಂತ : ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು

 ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಸಜೀವದಹನವಾಗಿರುವ ಮಾಹಿತಿ ಲಭ್ಯವಾಗಿದೆ. ಭಾನುವಾರದಿಂದ ನಡೆಯುತ್ತಿದ್ದ ಗಂಟೆಗಳ ಕಾರ್ಯಾಚರಣೆ…

31 mins ago

ಭಾರತದಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಅಕ್ಷಯ್‌ ಕುಮಾರ್‌

ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49…

48 mins ago

ಕಾಶ್ಮೀರ ವಾಪಸ್ ಪಡೆದೇ ಪಡೆಯುತ್ತೇವೆ: ಗೃಹ ಸಚಿವ ಅಮಿತ್ ಶಾ

ಪಾಕಿಸ್ತಾನದ ಬಳಿ ಪರಮಾಣು ಬಾಂಬ್​ ಇದೆ ಹಾಗಾಗಿ ನಾವು ಅವರನ್ನು ಗೌರವಿಸಬೇಕಾಗುತ್ತದೆ ಎಂಬ ಕಾಂಗ್ರೆಸ್​ ನಾಯಕ ಮಣಿಶಂಕರ್​ ಐಯ್ಯರ್​ ಹೇಳಿಕೆಗೆ…

1 hour ago

ಖಾಸಗಿ ಶಾಲೆಗಳಲ್ಲಿ 30% ವರೆಗೆ ಶುಲ್ಕ ಏರಿಕೆ : ಕಂಗಾಲಾದ ಪೋಷಕರು

2024-25ನೇ ಸಾಲಿಗೆ ಶಾಲಾ ಪ್ರವೇಶ ಪ್ರಕ್ರಿಯೆ ನಡೆಸುತ್ತಿರುವ ಖಾಸಗಿ ಶಾಲೆಗಳು ಶೇ.20ರಿಂದ 30ರವರೆಗೆ ಶುಲ್ಕ ಹೆಚ್ಚಿಸುವ ಮೂಲಕ ಸುಲಿಗೆ ಪದ್ಧತಿ…

2 hours ago