ಮೈಸೂರು: ಆಂಧ್ರಪ್ರದೇಶ ಮೂಲದ ಮಹಿಳಾ ನಿರ್ದೇಶಕಿ ವಿಜಯಾ ನರೇಶ್ ನಿರ್ದೇಶಿಸಿರುವ ಸಸ್ಪೆನ್ಸ್, ಹಾರರ್ ಹಾಗೂ ಥ್ರಿಲ್ಲರ್ ಕಥಾ ವಸ್ತುವುಳ್ಳ ರಿಯಾ ಕನ್ನಡ ಚಲನಚಿತ್ರ ಸೆ.16 ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ ಎಂದು ಚಿತ್ರದ ನಾಯಜ ಕಾರ್ತಿಕ್ ವರ್ಣೀಕರ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಲನಚಿತ್ರ ಕುಶಾಲನಗರದಲ್ಲಿಯೇ ಹೆಚ್ಚಿನ ಭಾಗ ಚಿತ್ರೀಕರಣಗೊಂಡಿದೆ. ಹದಿನಾಲ್ಕು ಪಾತ್ರಗಳ ಸುತ್ತ ಒಂದೇ ಮನೆಯಲ್ಲಿ ಸಾಗುವ ಚಲನಚಿತ್ರಇದಾಗಿದೆ. ನಿರ್ಮಾಪಕ ಹಾಗೂ ನಿರ್ದೇಶಕರನ್ನು ಹೊರತು ಪಡಿಸಿದರೆ ಉಳಿದವರೆಲ್ಲರೂ ಕನ್ನಡಿಗರೇ ಆಗಿದ್ದಾರೆ.
ಚಿತ್ರದಲ್ಲಿ ರಿಯಾ ಎನ್ನುವ ಪ್ರಮುಖ ಪಾತ್ರವನ್ನು ಮೈಸೂರಿನ ಬಾಲಕಿ ಅನನ್ಯ ನಿರ್ವಹಿಸಿದ್ದಾರೆ. ಈಗಾಗಲೇಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಾಕಷ್ಟು ಕುತೂಹಲ ಹಾಗೂ ಕಾತುರಗಳನ್ನು ಚಿತ್ರ ಹುಟ್ಟುಹಾಕಿದೆ. ಹೀಗಾಗಿ ಚಿತ್ರ ಯಶಸ್ವಿಯಾಗುವ ನಿರೀಕ್ಷೆಯಿದೆ ಎಂದರು.
ಅನನ್ಯ, ಸಾವಿತ್ರಿ ಕೃಷ್ಣ, ನರೇಸ್, ಸುಧೀರ್, ರಣವೀರ್ ಪಾಟೀಲ್, ಇನ್ನಿತರರು ಇದ್ದರು.