Categories: ಮೈಸೂರು

ಮೈಸೂರು: ಜೈಲಿನಿಂದ ಬಂದ ಮೇಸೇಜ್ ಗೆ ರಾಖಿ ಸಾವಂತ್ ಗರಂ

ಮೈಸೂರು: ಸದಾ ಸುದ್ದಿಯಲ್ಲಿರುವ ನಟಿ ರಾಖಿ ಸಾವಂತ್ ಜೈಲಿನಲ್ಲಿರುವ ತನ್ನ ಪತಿ ಆದಿಲ್ ಖಾನ್ ಕಳಿಸಿರುವ ಮೇಸೇಜ್ ಓದಿ ಕೆಂಡಾಮಂಡಲವಾಗಿದ್ದು, ಗಂಡನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಖಿ ಸಾವಂತ್ ಮೈಸೂರಿನ ಉದ್ಯಮಿ ಆದಿಲ್ ಖಾನ್ ಅವರನ್ನು ಮದುವೆಯಾಗಿ ಅಚ್ಚರಿ ನೀಡಿದ್ದರು. ಇದಾದ ನಂತರ ಇವರ ನಡುವೆ ಸಂಬಂಧ ಹಳಸಿ ಹೋಗಿ ಆತನ ವಿರುದ್ಧ ದೂರು ನೀಡಿದ ಪರಿಣಾಮ ಆತ ಜೈಲಿನಲ್ಲಿದ್ದಾನೆ. ಆದರೆ ಆತ ಜೈಲಿನಲ್ಲಿದ್ದುಕೊಂಡೇ ರಾಖಿಗೆ ಮೆಸೇಜ್ ಕಳಿಸಿ ನಾವಿಬ್ಬರೂ ಹಳೆಯದನ್ನು ಮರೆತು ಮತ್ತೆ ಜತೆಯಾಗಿರೋಣ ಎಂದಿದ್ದಾನಂತೆ. ಆದರೆ ಆತ ನಂಬಿಕೆಗೆ ಅರ್ಹನಲ್ಲದ ವ್ಯಕ್ತಿ ಎಂಬುದು ರಾಖಿಯ ಆರೋಪವಾಗಿದೆ.

ಇಷ್ಟಕ್ಕೂ ರಾಖಿಸಾವಂತ್ ಗೆ ಜೈಲಿನಲ್ಲಿರುವ ಗಂಡ ಆದಿಲ್ ಖಾನ್ ಕಳಿಸಿರುವ ಮೇಸೇಜ್ ಏನೆಂದರೆ ‘ನನ್ನಿಂದ ತಪ್ಪಾಗಿದೆ. ಮತ್ತೆ ನಾನು ನಿನ್ನೊಂದಿಗೆ ಬದುಕುವೆ. ನನ್ನ ಮೇಲಿನ ದೂರನ್ನು ವಾಪಸ್ಸು ತೆಗೆದುಕೊ. ಒಟ್ಟಿಗೆ ಖುಷಿಯಾಗಿ ಬದುಕೋಣ’ಎಂದು ಮೇಸೇಜ್ ಮಾಡಿದ್ದು, ಇದನ್ನು ಓದಿದ ರಾಖಿಯ ಕೋಪದ ಕಟ್ಟೆ ಒಡೆದಿದೆ. ಮತ್ತೆ ಅವನು ನನ್ನೊಂದಿಗೆ ಬದುಕುತ್ತೇನೆ ಎನ್ನುವುದು ನನ್ನನ್ನು ಸಾಯಿಸೋದಕ್ಕೆ ಮಾಡಿರುವ ಫ್ಲಾನ್ ಆಗಿದೆ. ಹೀಗಾಗಿ ಅವನು ನನ್ನ ಜೊತೆ ಇರುತ್ತೇನೆ ಎಂದು ಹೇಳುತ್ತಿದ್ದಾನೆ. ಆದರೆ, ಅವನನ್ನು ನಾನು ನಂಬುವುದಿಲ್ಲ. ಮತ್ತೆ ಒಟ್ಟಿಗೆ ಬದುಕುವುದಿಲ್ಲ. ಹಾಗೆಂದು ಅವನಿಗೆ ಡೈವೋರ್ಸ್ ಕೂಡ ನೀಡುವುದಿಲ್ಲ. ನಾನು ಮದುವೆಯಾಗುವುದಿಲ್ಲ. ಅವನಿಗೆ ತಕ್ಕ ಪಾಠ ಕಲಿಸುವುದಾಗಿ ರಾಖಿ ಸಾವಂತ್ ಹೇಳಿದ್ದಾರೆ.

ನನಗೆ ಅವನ ಜತೆ ಬದುಕೋದಕ್ಕೆ ಇಷ್ಟ ಇಲ್ಲ. ಹಾಗೆಂದು ನಾನು ಡೈವೋರ್ಸ್ ಕೊಟ್ಟರೆ ಅವನು ಬೇರೆ ಮದುವೆಯಾಗುತ್ತಾನೆ ಅದರಿಂದ ಬೇರೆ ಹುಡುಗಿಯ ಬದುಕು ಹಾಳಾಗುತ್ತದೆ. ಅದು ಆಗಬಾರದು ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಅವನು ನನ್ನಂತೆ ಇನ್ನ್ಯಾರಿಗೂ ಮೋಸ ಮಾಡಬಾರದು. ಮತ್ತೆ ಅವನ ಬಾಳಲ್ಲಿ ಯಾವ ಹುಡುಗಿಯೂ ಬರುವುದು ಬೇಡ ಎನ್ನುವುದು ರಾಖಿ ಸಾವಂತ್ ನ ಆಕ್ರೋಶದ ಮಾತಾಗಿದೆ. ಹಾಗಾದರೆ ಮುಂದೆನಾಗುತ್ತದೆ ಕಾದು ನೋಡಬೇಕಾಗಿದೆ.

Gayathri SG

Recent Posts

ಅಶ್ಲೀಲ‌ ವಿಡಿಯೋ ಕೇಸ್: ಮೂಡಿಗೆರೆಯಲ್ಲಿ ಪ್ರಜ್ವಲ್ ಬಂಧನ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಪ್ರಜ್ವಲ್ ನನ್ನು ಬಂಧಿಸಿದ್ದಾರೆ.

17 mins ago

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯ ಶವ ಪತ್ತೆ

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್‌ ಶವವಾಗಿ ಪತ್ತೆಯಾಗಿದ್ದಾನೆ.

25 mins ago

ದಾಭೋಲ್ಕರ ಹತ್ಯೆ ಕೇಸ್ ನಲ್ಲಿ ಸನಾತನ ಸಂಸ್ಥೆಯ ನಿರಪರಾಧಿತನ ಸಾಬೀತು; ಸನಾತನ ಸಂಸ್ಥೆ ಸಂತಸ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ವಿಶೇಷ ನ್ಯಾಯಾಲಯ ಇಂದು ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ…

25 mins ago

ಕೊಲ್ಲೂರು ಪುಣ್ಯ ನದಿಗಳ ಮಾಲಿನ್ಯ: ಅರ್ಜಿ ವಿಚಾರಣೆಗೆ ಹಸಿರು ಪೀಠ ಅಂಗೀಕಾರ

ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರಿನ ಪುಣ್ಯ ನದಿಗಳನ್ನು ಮಾಲಿನ್ಯಗೊಳಿಸುತ್ತಿರುವ, ಪರಿಸರ ನಾಶಗೊಳಿಸುತ್ತಿರುವ ಹಾಗೂ ಸರ್ಕಾರಿ ಭೂಮಿಗಳ ಅತಿಕ್ರಮಣದ…

40 mins ago

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್; ಪ್ರಮುಖ ಆರೋಪಿ ಬಂಧನಕ್ಕೆ ಪತ್ನಿ ನೂತನ ಸಂತಸ

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮುಸ್ತಫಾ ಪೈಚಾರನ್ನ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದು, ಮುಸ್ತಫಾ…

46 mins ago

ಮೊದಲ ಬಾರಿಗೆ ಮರಾಠಿ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ

ಕನ್ನಡದ ಹೆಮ್ಮೆಯ ಕಲೆ ಯಕ್ಷಗಾನ ಇದೀಗ ಗಡಿಗಳನ್ನು ದಾಟಿ ಮಹಾರಾಷ್ಟ್ರದ ಕಡೆಗೆ ಪಯಣ ಬೆಳೆಸಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ…

59 mins ago