ಮೈಸೂರು

ಮೈಸೂರಿನ ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿದ್ದ ಬಾಲಕನ ಅಪಹರಣ ಸುಖಾಂತ್ಯ!

ಮೈಸೂರು: ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾಗಿದ್ದ ಬಾಲಕನನ್ನು ರಕ್ಷಿಸುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದು, ಆ ಮೂಲಕ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪ್ರಕರಣ ಸುಖಾಂತ್ಯಗೊಂಡಿದ್ದು, ಪೊಲೀಸರು ಹಾಗೂ ಬಾಲಕನ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.

ಮೈಸೂರಿನ ದೊಡ್ಡಾಸ್ಪತ್ರೆಯೆಂದೇ ಖ್ಯಾತಿ ಪಡೆದಿರುವ ಕೆ.ಆರ್.ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರಾಗಿರುವ ಡಾ.ಗಿರೀಶ್ ಮತ್ತು ಡಾ.ಸುಮಾ ದಂಪತಿ ಪುತ್ರ ಅಭಿಜಿತ್ ನನ್ನು ಗುರುವಾರ ರಾತ್ರಿ ಅಪಹರಿಸಲಾಗಿತ್ತು. ನಗರದ ಶ್ರೀರಾಂಪುರ ಬಡಾವಣೆ ಎರಡನೇ ಹಂತದ ನಿವಾಸಿಯಾದ ಡಾ.ಗಿರೀಶ್ ಅವರ ಮಗ ಅಭಿಜಿತ್ ಮನೆಗೆ ಸಮೀಪದಲ್ಲೇ ಸೈಕಲ್ ತುಳಿದುಕೊಂಡು ಹೋಗುತ್ತಿದ್ದ ವೇಳೆ ನೀಲಿ ಬಣ್ಣದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿದ್ದರು.

ಬಳಿಕ ಪೋಷಕರಿಂದ ಮಾಹಿತಿ ಪಡೆದ ಕುವೆಂಪುನಗರ ಠಾಣೆ ಪೊಲೀಸರು ಕೂಡಲೇ ದೂರು ದಾಖಲಿಸಿಕೊಂಡು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ನಂತರ ವಿವಿಧ ತಂಡದ ಮೂಲಕ ಕಾರ್ಯಾಚರಣೆಗೆ ಇಳಿದ ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸಿದರು.

ಪೊಲೀಸರು ಸುತ್ತುವರೆದಿರುವ ಮಾಹಿತಿ ತಿಳಿದ ಅಪಹರಣಕಾರರು ಬಾಲಕ ಅಭಿಜಿತ್‌ನನ್ನು ನಿರ್ಜನ ಪ್ರದೇಶದಲ್ಲಿ ಇಳಿಸಿ ಪರಾರಿಯಾದರು ಎಂದು ಹೇಳಲಾಗಿದೆ. ಆದರೆ, ಈ ಕುರಿತು ಪೊಲೀಸರು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಮತ್ತೊಂದು ಮೂಲದ ಪ್ರಕಾರ ಅಪಹರಣಕಾರರ ಹೆಡೆಮುರಿ ಕಟ್ಟಿರುವ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಹೇಳಲಾಗಿದೆ.

ಅಪಹೃತಗೊಂಡ ಬಾಲಕ ಪೋಷಕರ ಬಳಿ ಬಂದ ನಂತರ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆತನ ಹೇಳಿಕೆಯ ಪ್ರಕಾರ ಸೈಕಲ್ ಹೊಡೆಯುತ್ತಿದ್ದ ನನ್ನನ್ನು ನಾಲ್ವರ ತಂಡ ಏಕಾಏಕಿ ಕಾರಿನೊಳಗೆ ಹಾಕಿಕೊಂಡರು. ಆ ಕಾರಿನ ನಂಬರ್ ಕೆಎ೦ 1 ಎಂದು ಗಮನಿಸಿದೆ. ಮಿಕ್ಕ ನಂಬರ್ ತಿಳಿದುಕೊಳ್ಳ ಬೇಕೆನ್ನುವಷ್ಟರಲ್ಲಿ ನನ್ನನ್ನು ಎತ್ತಿ ಕಾರಿನಲ್ಲಿ ಹಾಕಿದರು. ನನ್ನನ್ನು ಹಿಂಬದಿಯ ಸೀಟಿನಲ್ಲಿ ಕೂರಿಸಿದರು. ನಾನು ಹಿಂಬದಿ ಗಾಜಿನ ಮೂಲಕ ಹೊರಗಡೆ ನೋಡಲು ಹೋದಾಗ ಕತ್ತನ್ನು ತಿರುಗಿಸಿದರು. ನಂತರ ಕೆರೆ ಏರಿ ಪಕ್ಕದ ರಸ್ತೆ, ರಿಂಗ್ ರಸ್ತೆ ಮೂಲಕ ಹಳ್ಳಿ ಕಡೆ ಕರೆದುಕೊಂಡು ಹೋದರು. ಮನೆಯಿಂದ ಅಂದಾಜು 20 ಕಿಮೀ ಡಿಸ್ಟೆನ್ಸ್‌ನಲ್ಲಿ ನನ್ನನ್ನು ಸುತ್ತಾಡಿಸಿದರು. ಒಂದು ಕಡೆ ನನ್ನನ್ನು ಕೆಳಗಿಳಿಸಿದರು. ಆಗ ಒಬ್ಬ ಬೀಡಿ ತರಲು ಹೋದ.

ಮತ್ತೊಬ್ಬ ನನಗೆ ಕುಡಿಯಲು ನೀರು, ಬಿಸ್ಕತ್ತು, ಚಾಕಲೇಟ್ ನೀಡಿದರು. ನಾನು ಅದ್ಯಾವುದನ್ನೂ ತಿನ್ನಲಿಲ್ಲ. ನಂತರ ಮತ್ತೆ ಕಾರು ಚಾಲನೆ ಮಾಡಿಕೊಂಡು ಹೊರಟರು. ಅಷ್ಟರ ವೇಳೆಗೆ ಮತ್ತೊಬ್ಬ ಕಾರಿನಲ್ಲಿ ಡೀಸೆಲ್ ಇಲ್ಲ, ಐದು ಕಿಮೀ ಮಾತ್ರ ಹೋಗಬಹುದು ಎನ್ನುತ್ತಿದ್ದ. ಅಷ್ಟರಲ್ಲಿ ಕಾರಿನ ಪಕ್ಕದಲ್ಲಿ ಅವರುಗಳು ಏನೇನೋ ಮಾತನಾಡುತ್ತಿದ್ದರು. ಅದರ ಮಧ್ಯೆ ನನಗೆ ಹೆದರಿಸಿದರು. ನೀನೇದರೂ ಈ ವಿಚಾರವನ್ನು ನಿಮ್ಮ ಅಪ್ಪ ಅಮ್ಮನಿಗೆ ಹೇಳಿದಲ್ಲಿ ನಿನ್ನನ್ನು ಸ್ಕೂಲಿನಿಂದ ಎತ್ತಾಕಿಕೊಂಡು ಹೋಗಿ ಮರ್ಡರ್ ಮಾಡುತ್ತೇವೆ ಎಂದರು ಎಂದು ಮಾಹಿತಿ ನೀಡಿದ್ದಾನೆ.

Sneha Gowda

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

8 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

9 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

9 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

9 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

9 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

10 hours ago