Categories: ಮೈಸೂರು

ಮೈಸೂರು: ಭೂತಾಪಮಾನ ಏರಿಕೆ ಜೀವಸಂಕುಲಕ್ಕೆ ಮಾರಕ

ಮೈಸೂರು : ಮನುಷ್ಯನಲ್ಲಿ ದುರಾಸೆಗಳು ಹೆಚ್ಚಿದಂತೆ, ಪರಿಸರದ ಮೇಲೆ ದೌರ್ಜನ್ಯವೂ ಹೆಚ್ಚಿದೆ. ಕಟ್ಟಡಗಳ ಮೋಹದಿಂದಾಗಿ ಗಿಡಮರಗಳು ನಾಶವಾಗಿವೆ. ಪ್ರಕೃತಿಯ ಸಹಜ ವಾತಾವರಣ ಕಲುಷಿತವಾಗಿ, ಭೂತಾಪಮಾನ ಏರುತ್ತಿರುವುದರಿಂದ ಜೀವಕುಲಕ್ಕೆ ಮಾರಕವಾಗುತ್ತಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಟಿ ಸತೀಶ್ ಜವರೇಗೌಡ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಷನ್ ವತಿಯಿಂದ ಮಂಗಳವಾರ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಕೃತಿಯಲ್ಲಿ ಮನುಷ್ಯನ ಹಸ್ತಕ್ಷೇಪ ಅತಿಯಾದ ಕಾರಣ ಹವಾಮಾನ ಮತ್ತು ವಾಯುಗುಣ ವೈಪರೀತ್ಯಗಳು ಪ್ರತಿದಿನ ನಮ್ಮನ್ನು ಕಾಡುತ್ತಿವೆ ಎಂದರು.

ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಪರಿಸರವನ್ನು ಪ್ರೀತಿಸಬೇಕು. ಎಲ್ಲೆಡೆ ಗಿಡಗಳನ್ನು ನೆಟ್ಟು ಬೆಳೆಸಬೇಕು. ಎಲ್ಲೆಂದರಲ್ಲಿ ಕಸ ಎಸೆಯಬಾರದು. ಆ ಮೂಲಕ ಯಾವುದೇ ರೀತಿಯ ಮಾಲಿನ್ಯ ಮಾಡದೆ ಪರಿಸರವನ್ನು ಸ್ವಚ್ಚತವಾಗಿಟ್ಟುಕೊಂಡು ಸಂರಕ್ಷಣೆ ಮಾಡಬೇಕು ಎಂದು ಕರೆ ನೀಡಿದರು.

ಮ್ಯಾಜಿಕ್ ಬಸ್ ಇಂಡಿಯಾ ಫಂಡೇಷನ್ನಿನ ತರಬೇತಿ ಮೇಲ್ವಿಚಾರಣಾಧಿಕಾರಿ ಸಂಗೀತಾ ಮಾತನಾಡಿ, ಮಿತಿಮೀರಿದ ಪ್ಲಾಸ್ಟಿಕ್ ಬಳಕೆಯಿಂದ ಮತ್ತು ಅದನ್ನು ಎಲ್ಲೆಂದರಲ್ಲಿ ಸುಡುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ. ಜೊತೆಗೆ ಮಾರಣಾಂತಿಕ ರೋಗಗಳು ಹೆಚ್ಚಾಗುತ್ತಿದೆ. ಆದ್ದರಿಂದ ಪ್ಲಾಸ್ಟಿಕ್ ಬಳಕೆ ಕೈಬಿಟ್ಟು, ಬಟ್ಟೆಯ ಬ್ಯಾಗುಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.

ಮನೆ ಮತ್ತು ಶಾಲೆಯಲ್ಲಿನ ತ್ಯಾಜ್ಯ ವಸ್ತುಗಳ ನಿರ್ವಹಣೆಯ ಬಗ್ಗೆ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ಮೇಲ್ವಿಚಾರಕಿ ಶಿವಮ್ಮ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಿದರು. ಗ್ರಾಮ ಪಂಚಾಯತಿಯ ಕಸ ಸಾಗಣೆ ವಾಹನ ಚಾಲಕರಾದ ವಾಣಿ ಮತ್ತು ಹರ್ಷಿತಾ ಅವರಿಗೆ ಮಕ್ಕಳು ಶುಭಾಶಯ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಜೊತೆಗೆ ಶಾಲಾವರಣದಲ್ಲಿ ಪಪ್ಪಾಯಿ ಮತ್ತು ನುಗ್ಗೆ ಗಿಡಗಳನ್ನು ವಿದ್ಯಾರ್ಥಿಗಳಿಂದ ನೆಡಿಸಿ ದತ್ತು ನೀಡಲಾಯಿತು.

ಇದೇ ಸಂದರ್ಭದಲ್ಲಿ ತ್ಯಾಜ್ಯ ವಸ್ತುಗಳು ಮತ್ತು ಪ್ಲಾಸ್ಟಿಕ್ ಬಾಟಲಿಗಳ ಮರು ಬಳಸಿ ಉಪಯುಕ್ತ ವಸ್ತುಗಳ ತಯಾರಿಸುವ ‘ಕಸದಿಂದ ರಸ’ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಎಸ್. ವಿಸ್ಮಯ (ಪ್ರಥಮ), ಹೆಚ್.ಜೆ. ನಮ್ರತ್ ಗೌಡ (ದ್ವಿತೀಯ), ಭೈರವ ನಾಯಕ (ತೃತೀಯ), ದೀಕ್ಷಿತಾ ಮತ್ತು ಫೌಜಿಯಾ (ಸಮಾಧಾನಕರ) ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಮಂಚಪ್ಪ, ಪ್ರಭಾರ ಮುಖ್ಯ ಶಿಕ್ಷಕಿ ಕೆ.ವಿ. ಪುಷ್ಪಲತಾ, ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಯೂತ್ ಮೆಂಟರ್ ಡಿ.ಕೆ. ವಿಜೇತ ಮತ್ತು ಎಸ್. ರಂಗರಾಜು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

Sneha Gowda

Recent Posts

ಮೋದಿ ಬಂದರೂ ಮಾದಿಗರು ಬಿಜೆಪಿ ಬೆಂಬಲಿಸಲ್ಲ: ಚಂದ್ರಕಾಂತ ಹಿಪ್ಪಳಗಾಂವ

ತೆಲಂಗಾಣದ ಮಂದಾಕೃಷ್ಣ ಮಾದಿಗ ಅಲ್ಲ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಬಂದರೂ ಮಾದಿಗರು ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಪರಿಶಿಷ್ಟ…

1 min ago

ಬೀದರ್‌ನ ’14 ಪರೀಕ್ಷಾ ಕೇಂದ್ರಗಳಲ್ಲಿ ‘ನೀಟ್‌’ ಪರೀಕ್ಷೆ

'ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್‌) ಜಿಲ್ಲೆಯ 14 ಪರೀಕ್ಷಾ ಕೇಂದ್ರಗಳಲ್ಲಿ ಮೇ 5ರಂದು ನಡೆಯಲಿದೆ' ಎಂದು ನೀಟ್‌ ಸಂಯೋಜಕ…

2 mins ago

ಮಳೆ, ಗಾಳಿ ಆರ್ಭಟಕ್ಕೆ ಧರೆಗುರುಳಿದ ಏಸು ಕ್ರೈಸ್ತನ ಮೂರ್ತಿ

ಬೀಸಿದ ಗಾಳಿಗೆ ಸುರಿದ ಮಳೆಯ ರಭಸಕ್ಕೆ ಏಸು ಕ್ರೈಸ್ತನ ಮೂರ್ತಿ ಧರೆಗುರುಳಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮರಿ…

8 mins ago

ಶರೀರದ ದಾಹ, ಬಾಯಾರಿಕೆ ನಿವಾರಣೆಗಾಗಿ ಚಿಂಚಾ ಪಾನಕ ಬಳಸಿ: ಡಾ.ಶುಭ ರಾಜೇಶ್

ಬೇಸಿಗೆ ಕಾಲದಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕು. ಜೀರ್ಣಕ್ರಿಯೆ ಉತ್ತಮಗೊಳಿಸಲು ಶರೀರದ ದಾಹ ನಿವಾರಣೆಗಾಗಿ ಆರೋಗ್ಯಕರ…

23 mins ago

ರಾಜು ಆಲಗೂರರಿಗೆ ಕುರುಬ ಸಮಾಜದ ಬೆಂಬಲ: ಮಲ್ಲಪ್ಪ ಸಾಲಿ

ಕುರುಬ ಸಮಾಜ ಯಾವತ್ತೂ ನ್ಯಾಯದ ಪರವಾಗಿದೆ. ಹಾಗಾಗಿ ಯೋಗ್ಯ ಅಭ್ಯರ್ಥಿಯಾದ ರಾಜು ಆಲಗೂರರಿಗೆ ಬೆಂಬಲ ನೀಡುತ್ತದೆ ಎಂದು ಮಾಜಿ ಜಿಪಂ…

38 mins ago

ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು

ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಸಾಕಷ್ಟು ಲಾಭಗಳೂ ಇವೆ. ಈ ಬೇಸಗೆಯಲ್ಲಂತೂ ಆಗಾಗ ಸಲಾಡ್‌ಗಳ ರೂಪದಲ್ಲಾದರೂ ಹಸಿ ಈರುಳ್ಳಿ ಬಳಸಬೇಕು.

52 mins ago