Categories: ಮೈಸೂರು

ಮೈಸೂರು: ಎಸ್ ಡಿ ಎಮ್ ಐ ಎಮ್ ಡಿ ಸಂಸ್ಥೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ

ಮೈಸೂರು: ನಾಯಕರುಗಳಿಗೆ ಗೌರವ ಸಲ್ಲಿಸುವುದರ ಜೊತೆಗೆ ಯುವ ನಿರ್ವಹಣಾಕಾರರಿಗೆ ಬದಲಾವಣೆಯ ಹರಿಕಾರರಾಗಬೇಕೆಂದು ಕಿವಿಮಾತು ಹೇಳುತ್ತ ಮೈಸೂರಿನ ಎಸ್ ಡಿ ಎಮ್ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ (SDMIMD) ಸಂಸ್ಥೆಯವರು ಸ್ವತಂತ್ರ ದಿನಾಚರಣೆಯ ಅಮೃತ ಮಹೋತ್ಸವವನ್ನು ಆಚರಿಸಿದರು.

ಡಾ. ರಿಯಾಜ್ ಅಹ್ಮದ್ ಕೆ., ಅಧ್ಯಾಪಕರು, ಎಸ್ ಡಿ ಎಮ್ ಐ ಎಮ್ ಡಿ – ಇವರು ಮುಖ್ಯ ಅತಿಥಿಗಳಾಗಿ, ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಿಯಾಜ್ ಅವರು ಸ್ವಾತಂತ್ರ್ಯದ ವಿವಿಧ ಹಂತಗಳನ್ನು ನೆನಪಿಸಿಕೊಂಡು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ  ಮೂರು ಮಟ್ಟಗಳ ನಾಯಕರುಗಳಿಗೆ ವಂದಿಸಬೇಕು. ಪ್ರಾದೇಶಿಕ ಮತ್ತು ರಾಷ್ಟ್ರಮಟ್ಟದ ಅನೇಕ ನಾಯಕರುಗಳ ಅಜ್ಞಾತ ತ್ಯಾಗಗಳು ಚರಿತ್ರೆಯಲ್ಲಿ ದಾಖಲಾಗಿಲ್ಲ. ಉದಾಹರಣೆಗೆ, ಶ್ರೀ ರಾಮಚಂದ್ರ ರಾವ್, ಮೈಸೂರಿನ ಹಿರಿಯ ಮಹಾತ್ಮರಂತೆಯೇ ಎಲ್ಲಾ ರಾಜ್ಯಗಳ ಹಾಗೂ ಜನಾಂಗೀಯ ನಾಯಕರುಗಳು ರಾಷ್ಟ್ರಮಟ್ಟದ ನಾಯಕರಂತೆಯೇ ಬಲಿದಾನ ನೀಡಿದ್ದಾರೆ. ಸಂಕಲ್ಪ ಮತ್ತು ದೇಶಕ್ಕಾಗಿ ಬದ್ಧರಾಗಿರುವವರಿಗೆ ಆದರ್ಶ ಪ್ರಾಯರಾದ ಭಗತ್ ಸಿಂಗ್ ರಾಷ್ಟ್ರದ ನಾಯಕರು. ಜನಾಂಗೀಯ ಗುಂಪು, ಭಾಷೆ, ಧರ್ಮ, ಜಾತಿ ಹಾಗೂ ಇತರ ಅಂತರಗಳನ್ನು ಮೀರಿ ಎಲ್ಲಾ ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ಸಮನಾಗಿ ತಮ್ಮ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ತಮ್ಮ ಮಾತುಗಳನ್ನು ಮುಂದುವರೆಸಿದ ಅವರು, ಯುವ ನಿರ್ವಹಣಾಕಾರು ಬದಲಾವಣೆಯ ಹರಿಕಾರರಾಗಬೇಕೆಂಬ ಕಿವಿಮಾತನ್ನು ಹೇಳಿದರು.

ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು. ಡಾ. ಎ ಪಿ ಜಿ ಅಬ್ದುಲ್ ಕಲಾಂ ಅವರು ಹೇಳಿದಂತೆ, ಸತ್ಯವಾದ ಆಚಾರ ನಮ್ಮ ಹೃದಯದಲ್ಲಿ ಇದ್ದರೆ, ನಮ್ಮ ನಡವಳಿಕೆಯಲ್ಲಿ ಸೌಂದರ್ಯ, ಮನೆಯಲ್ಲಿ ಸಾಮರಸ್ಯ ಇರುತ್ತದೆ. ಇದರಿಂದ ದೇಶಕ್ಕೆ ಸುವ್ಯವಸ್ಥೆ ಹಾಗೂ ವಿಶ್ವಕ್ಕೆ ಶಾಂತಿ ದೊರೆಯುತ್ತದೆ. ಕ್ರೀಡೆಯಲ್ಲಿ ಗೆದ್ದವರಿಗೆ ಪ್ರಮಾಣಪತ್ರ ವಿತರಣೆ, ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಯ ಗಾಯನ ಹಾಗೂ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳಿಂದ ಅಭಿಪ್ರಾಯ, ಆಲೋಚನೆಗಳ ಹಂಚಿಕೆ – ಇವೆಲ್ಲವೂ ಕಾರ್ಯಕ್ರಮದ ಪ್ರಮುಖ ಅಂಶಗಳಾಗಿದ್ದವು.

ನಿರ್ದೇಶಕರಾದ ಡಾ. ಎನ್. ಆರ್. ಪರಶುರಾಮನ್, ಉಪನಿರ್ದೇಶಕರಾದ ಡಾ. ಎಸ್. ಎನ್. ಪ್ರಸಾದ್, ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಈ ಆಚರಣೆಯಲ್ಲಿ ಪಾಲ್ಗೊಂಡರು.

 

Sneha Gowda

Recent Posts

ಯಾರನ್ನು ಬಂಧಿಸಬೇಕೋ ಅವರನೆಲ್ಲಾ ಬಂಧಿಸಿ ಜೈಲಿಗೆ ತಳ್ಳಿ ಎಂದು ಮೋದಿಗೆ ಚಾಲೆಂಜ್‌ ಹಾಕಿದ ಕೇಜ್ರಿವಾಲ್

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ…

10 mins ago

ಜುಲೈ 1ರಿಂದ ಮೂರು ಹೊಸ ಕ್ರಿಮಿನಲ್ ಕಾನೂನು ಜಾರಿ

ಮೂರು ಹೊಸ ಕ್ರಿಮಿನಲ್ ಕಾನೂನುಗಳು ಸರ್ಕಾರದ ಅಧಿಸೂಚನೆಯ ಪ್ರಕಾರ ಜುಲೈ 1ರಿಂದ ಜಾರಿಗೆ ಬರಲಿವೆ. ಇದರಲ್ಲಿ ಭಾರತೀಯ ನ್ಯಾಯ ಸಂಹಿತಾ,…

30 mins ago

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಿಭವ್‌ ಕುಮಾರ್‌ 5 ದಿನ ಕಸ್ಟಡಿಗೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿರುವ ದಿಲ್ಲಿ ಮುಖ್ಯಮಂತ್ರಿ…

54 mins ago

ಆರ್​ಸಿಬಿ ಮುಂದಿನ ಪಂದ್ಯವನ್ನು ಯಾವ ತಂಡದ ಜೊತೆ ಆಡಲಿದೆ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಸೋಲಿಸಿ ರಾಯಲ್ಲಾಗಿಯೇ ಪ್ಲೇಆಫ್​ಗೆ ಪ್ರವೇಶಿಸಿದೆ. ಇನ್ನು ಆರ್​ಸಿಬಿ…

1 hour ago

ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ

ನಗರದ ಮಂಗಲಪೇಟ್‌ ಸಮೀಪದ ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ ಸಂಭ್ರಮದಿಂದ ನಡೆಯಿತು.

2 hours ago

ಆಧಾರ್‌ ದುರುಪಯೋಗ: ಕರ್ನಾಟಕದಿಂದ 2.95 ಲಕ್ಷ ದೂರು ದಾಖಲು

ಜನರು ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಸೈಬರ್ ವಂಚಕರು, ಒಂದೇ ಸಂಖ್ಯೆ ಸಿಮ್‌ಗಳನ್ನು ಖರೀದಿಸಿರುವ ಸಂಬಂಧ ಟೆಲಿಕಾಂ ಅನಾಲಿಟಿಕಲ್‌ ಫಾರ್ ಫ್ರಾಡ್‌…

2 hours ago