Categories: ಮೈಸೂರು

ಮೈಸೂರು: ಸೇವಾ ಕಾರ್ಯಗಳು ಸಾರ್ಥಕತೆ ತಂದುಕೊಡುತ್ತವೆ – ಸಿ ಎನ್ ಮಂಜೇಗೌಡ

ಮೈಸೂರು: ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು, ಸೇವಾ ಮನೋಭಾವನೆಯಿಂದ ಮಾಡುವ ಕಾರ್ಯಗಳು ಸಾರ್ಥಕತೆಯ ಜೊತೆಗ ಸಾಫಲ್ಯತೆಯನ್ನು ತಂದುಕೊಡುತ್ತವೆ ಎಂದು ವಿಧಾನ ಪರಿಷತ್ ಸದಸ್ಯರಾದ ಸಿಎನ್ ಮಂಜೇಗೌಡ ಹೇಳಿದರು.

ಅಗ್ರಹಾರದ ನಟರಾಜ ಕಲ್ಯಾಣ ಮಂಟಪದಲ್ಲಿ ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್, ಲಯನ್ಸ್ ಕ್ಲಬ್ ಆಫ್ ಮೈಸೂರ್ ಗೋಲ್ಡನ್ ಸಿಟಿ, ಲಯನ್ಸ್ ಕ್ಲಬ್ ಆಫ್ ಕಾಮಧೇನು, ಲಯನ್ಸ್ ಕ್ಲಬ್ ಆಫ್ ಸಿರಿ ,ಲ್ಯಾನ್ಸ್ ಕ್ಲಬ್ ಆಫ್ ಸ್ಯಾಂಡಲ್ ವುಡ್ ಹಾಗೂ ಮೈಸೂರು ಶ್ರೀ ಶಕ್ತಿ ಮಹಿಳಾ ವೇದಿಕೆಯ ಸಂಯುಕ್ತಾಯದಲ್ಲಿ ಕರ್ನಾಟಕ ರಕ್ತ ಡಾ. ಪುನೀತ್ ರಾಜಕುಮಾರ್ ಸ್ಮರಣೆ ಹಾಗೂ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ದಿವ್ಯ ಸಾನಿಧ್ಯ ಹೊಸಮಠದ ಪೂಜ್ಯ ಶ್ರೀ ಶ್ರೀ ಚಿದಾನಂದ ಸ್ವಾಮಿಗಳು, ದೀಪ ಬೆಳಗಿಸಿ ವಿಶೇಷ ಚೇತನರಿಗೆ ಉಚಿತ ಕೃತಕ ಕಾಲು ಜೋಡಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಲಯನ್ಸ್‌ ಕ್ಲಬನ್‌ ಸಮಾಜ ಸೇವಾ ಕಾರ್ಯಗಳು ಜನಸಾಮಾನ್ಯರಿಗೆ ಅದರಲ್ಲೂ ಕಡು ಬಡವರಿಗೆ ಹೆಚ್ಚು ಉಪಯುಕ್ತರವಾಗಿವೆ. ವ್ಯಕ್ತಿತ್ವ ವಿಕಾಸನ, ಜನರ ಸೇವೆ ಹಾಗೂ ಉತ್ತಮ ಬಾಂಧವ್ಯ ಬೆಳೆಸಲು ಲಯನ್ಸ್ ಕ್ಲಬ್ ಗಳು ಮಾದರಿ ಸಂಸ್ಥೆಯಾಗಿವೆ ಇದನ್ನು ಎಲ್ಲರೂ ಉಪಯೋಗಿಸಿಕೊಳ್ಳಬೇಕು ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರಾದ ಡಾ. ಆರ್ ಎಚ್ ಪವಿತ್ರ. ಮರಣದ ನಂತರವೂ ಜೀವಿಸಿರುವ ಪುನೀತ್‌ ಜನನವಾದ ಮೇಲೆ ಮರಣ ನಿಶ್ಚಿತ. ಮರಣಿಸಿದ ನಂತರವೂ ಜನರ ಮನಸ್ಸಿನಲ್ಲಿ ಜೀವಂತ ವಾಗಿರುವಂತೆ ಬದುಕಬೇಕು. ಅಂಥ ಬದುಕು ಪುನೀತ್‌ ರಾಜ್‌ಕುಮಾರ್‌ ಅವರದ್ದಾಗಿತ್ತು. ಅಂಗವಿಕಲತೆ ಶಾಪವಲ್ಲ, ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಅದನ್ನು ಮೆಟ್ಟುನಿಂತು ಅಂಗವಿಕಲರು ಎಲ್ಲರಂತೆ ಬದುಕಲು ಸಾಧ್ಯ ಎಂದರು.

ಇದೇ ವೇಳೆ ಮೈಸೂರು ನಗರ ಮತ್ತು ಜಿಲ್ಲೆಯ ಹತ್ತು ಮಂದಿ ಫಲಾನುಭವಿಗಳಿಗೆ ಕೃತಕ ಕಾಲು ಜೋಡಣೆ ಮಾಡಲಾಯಿತು.

ಲಯನ್ಸ್ ಕ್ಲಬ್ ನ ಡಿಸ್ಟ್ರಿಕ್ಟ್ ಗವರ್ನರ್ ಡಾ. ವಿದ್ಯಾ, ಲಯನ್ಸ್ ಸಂಸ್ಥೆಯ ಫಸ್ಟ್ ಮಲ್ಟಿಪಲ್ ಕೌನ್ಸಿಲಿಂಗ್ ಅಧ್ಯಕ್ಷರಾದ ಡಾ. ನಾಗರಾಜ್ ಬಿ ಬೈರಿ, ಜಯಪ್ರಕಾಶ್, ಮಹಾವೀರಚಂದ್ ಬನ್ಸಾಲಿ, ಮೈಸೂರು ಗೋಲ್ಡನ್ ಸಿಟಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದಸುರೇಶ್ ಗೋಲ್ಡ್, ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರಾದ ಡಾ. ಆರ್ ಎಚ್ ಪವಿತ್ರ, ಕಾರ್ಯದರ್ಶಿ ಪ್ರಮೀಳಾ, ಜಿ ಎನ್ ಉಮಾಶಂಕರ್, ಸಿರಿ ಬಾಲು, ವೆಂಕಟೇಶ್, ಶೋಭಾ ಬಾಲು, ಚಲನಚಿತ್ರ ನಟರಾದ ಲಕ್ಷ್ಮಿಪತಿ, ಕೆ ಆರ್ ಮಿಲ್ ಶಿವಣ್ಣ, ಚಲನಚಿತ್ರ ನಿರ್ಮಾಪಕರು ಎಂ ಡಿ ಪಾರ್ಥ ಸಾರಥಿ, ಸಿ ಹುಚ್ಚಪ್ಪ ಚಾರ್, ಜಯರಾಜ್ ಅರಸು, ಹಾಗೂ ಇನ್ನಿತರರು ಹಾಜರಿದ್ದರು

Ashika S

Recent Posts

ಇರಾನ್‌ ವಶಪಡಿಸಿಕೊಂಡ ಹಡಗಿನಲ್ಲಿದ್ದ 5 ಭಾರತೀಯ ನಾವಿಕರ ಬಿಡುಗಡೆ

ಟೆಹ್ರಾನ್ ವಶಪಡಿಸಿಕೊಂಡ ಇಸ್ರೇಲಿ-ಸಂಬಂಧಿತ ಹಡಗಿನಲ್ಲಿದ್ದ ಐವರು ಭಾರತೀಯ ನಾವಿಕರನ್ನು ಬಿಡುಗಡೆ ಮಾಡಲಾಗಿದೆ.

10 mins ago

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ 99 ಬ್ಯಾಚ್ ನ 25ನೇ ವರ್ಷಾಚರಣೆ

ಪ್ರತಿಷ್ಠಿತ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ತನ್ನ ಮೊದಲ ಎಂ.ಬಿ.ಬಿ. ಎಸ್. ಬ್ಯಾಚ್ 99 ರ ಗುರುವಂದನ ಮತ್ತು 25ನೇ…

20 mins ago

ಹಿಂದೂಗಳ ಪವಿತ್ರ ಚಾರ್ ಧಾಮ್‌ ಯಾತ್ರೆ ಇಂದಿನಿಂದ ಆರಂಭ

ಹಿಂದೂಗಳ ಪವಿತ್ರ ಯಾತ್ರೆ ಆಗಿರುವ ಚಾರ್ ಧಾಮ್‌ ಯಾತ್ರೆ ಇಂದಿನಿಂದ ಆರಂಭವಾಗಲಿದೆ. ಕೇದಾರನಾಥ ಮತ್ತು ಯಮುನೋತ್ರಿ ದೇವಾಲಯಗಳು ಬೆಳಿಗ್ಗೆ 7…

35 mins ago

ಜೈಲಿನಲ್ಲಿರುವ ಮಾಜಿ ಸಚಿವ ಎಚ್‌.ಡಿ ರೇವಣ್ಣ ಅವರನ್ನು 3 ದಿನ ಯಾರು ಭೇಟಿ ಮಾಡುವಂತಿಲ್ಲ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಚಿವ ಎಚ್‌.ಡಿ ರೇವಣ್ಣ ಅವರು ನಿನ್ನೆ ಜಾಮೀನು ಸಿಗದ ಹಿನ್ನೆಲೆಯಲ್ಲಿ,…

57 mins ago

ಜಿಂದಾಲ್‌ನ ಎಚ್ಎಸ್ಎಂ ಪ್ಲಾಂಟ್‌ನಲ್ಲಿ ನೀರಿನ ಟ್ಯಾಂಕ್‌ಗೆ ಬಿದ್ದು 3 ಎಂಜಿನಿಯರ್‌ಗಳು ಮೃತ್ಯು

ನೀರಿನ ಟ್ಯಾಂಕ್‌ನಲ್ಲಿ ಬಿದ್ದು ಮೂವರು ಎಂಜಿನಿಯರ್‌ಗಳು ಸಾವಿಗೀಡಾದ ಘಟನೆ ಬಳ್ಳಾರಿ ಜಿಲ್ಲೆಯ ಜಿಂದಾಲ್‌ನ ಎಚ್ಎಸ್ಎಂ ಪ್ಲಾಂಟ್‌ನಲ್ಲಿ ನಡೆದಿದೆ.

1 hour ago

ವಿದ್ಯುತ್ ಹೈಟೆನ್ಷನ್ ವೈರ್ ತಾಗಿ ವ್ಯಕ್ತಿ ಮೃತ್ಯು

ವಿದ್ಯುತ್ ಹೈಟೆನ್ಷನ್ ವೈರ್ ತಾಕಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ನಡೆದಿದೆ.

2 hours ago