News Karnataka Kannada
Sunday, May 05 2024
ಮೈಸೂರು

ಮೈಸೂರು: ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕಟ್ಟಡ ಕುಸಿತ

Maharani
Photo Credit : By Author

ಮೈಸೂರು: ಪಾರಂಪರಿಕ ನಗರಿ ಮೈಸೂರಿನ ಹೆಗ್ಗುರುತಾಗಿದ್ದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕಟ್ಟಡ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಕಟ್ಟಡ ಕುಸಿದ ಪರಿಣಾಮ ಎರಡು ದಿನಗಳ ಕಾಲ ರಜೆ ನೀಡಲಾಗಿದೆ.

ಈ ಕಟ್ಟಡ ನೂರ ಆರು ವರ್ಷದ ಹಿಂದೆಯದ್ದಾಗಿದ್ದು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಂದಿನ ಮೈಸೂರು ಮಹಾರಾಜರು 1916ರ ಅವಧಿಯಲ್ಲಿ ನಿರ್ಮಾಣ ಮಾಡಲಾಗಿತ್ತು. ನಿರಂತರ ಮಳೆಯಿಂದಾಗಿ ಶಿಥಲಗೊಂಡ ಪರಿಣಾಮ ಶುಕ್ರವಾರ ಬೆ ಕಟ್ಟಡದ ಮೊದಲನೇ ಮಹಡಿಯಲ್ಲಿದ್ದ ರಸಾಯನಶಾಸ್ತ್ರ ವಿಭಾಗ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ಎರಡು ಕೊಠಡಿಗಳು ಕುಸಿದಿವೆ. ಎರಡು ಕೊಠಡಿ ಬಾಗಿಲು ತೆರೆದು ಅಧ್ಯಾಪಕರು ಒಳ ಹೋದಾಗ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದಲ್ಲದೆ, ಛಾವಣಿಯಲ್ಲಿ ಮಣ್ಣು ಉದುರುವುದನ್ನು ಗಮನಿಸಿ, ಪ್ರಾಂಶುಪಾಲರ ಗಮನಕ್ಕೆ ತಂದಿದ್ದಾರೆ. ಬಳಿಕ ಪ್ರಾಂಶುಪಾಲರು ಮೊದಲ ಅಂತಸ್ತಿನ ಎಲ್ಲಾ ಕೊಠಡಿಗಳಿಂದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಕೆಳಗೆ ಕಳಿಸಿ, ಯಾರೂ ಶಿಥಿಲವಾಗಿರುವ ಕೊಠಡಿಗೆ ಹೋಗದಂತೆ ಎಚ್ಚರಿಕೆ ವಹಿಸಿದ್ದಾರೆ. ಜತೆಗೆ ಕೊಠಡಿಯ ಬಾಗಿಲು ಮುಚ್ಚಿಸಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಎರಡೂ ಕೊಠಡಿಗಳು ಭಾರಿ ಶಬ್ಧದೊಂದಿಗೆ ನೆಲಕಪ್ಪಳಿಸಿವೆ.

ಪ್ರಯೋಗಾಲಯದ ಕೊಠಡಿ ಕುಸಿದಿರುವುದರಿಂದ ಅಲ್ಲಿದ್ದ ಅಂದಾಜು 40 ಲಕ್ಷ ರೂ. ಮೌಲ್ಯದ ಉಪಕರಣಗಳು ಸಂಪೂರ್ಣ ಹಾಳಾಗಿವೆ. ಪ್ರಯೋಗಾಲಯ ಪ್ರಾರಂಭಿಸುವಾಗ ಹೊಸ ಉಪಕರಣಗಳನ್ನು ಖರೀದಿಸಬೇಕಾಗುತ್ತದೆ ಎಂದು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪದ್ಮನಾಭ ತಿಳಿಸಿದ್ದಾರೆ.

ಐತಿಹಾಸಿಕ ಕಟ್ಟಡ ಮಹಾರಾಜ 10೦ನೇ ಚಾಮರಾಜೇಂದ್ರ ಒಡೆಯರ್ ಅವರ ಪತ್ನಿ ಕೆಂಪನಂಜಮ್ಮಣಿಯವರಿಗಾಗಿ ಪ್ರಾಥಮಿಕ ಮತ್ತು ಮಾಧ್ಯಮಿಕ ವಿಭಾಗಗಳೊಂದಿಗೆ ಮಹಾರಾಣಿ ಹುಡುಗಿಯರ ಶಾಲೆಯನ್ನು 1881ರ ಮಾರ್ಚ್ 16 ರಂದು ಪ್ರಾರಂಭಿಸಲಾಗಿತ್ತು. 1902ರಲ್ಲಿ ಈ ಶಾಲೆಯು ಮಹಾರಾಣಿ ಕಾಲೇಜ್ ಆಗಿ ಮೇಲ್ದರ್ಜೆಗೇರಿತ್ತು. ಪ್ರಸ್ತುತ ಕಟ್ಟಡವನ್ನು 1916ರಲ್ಲಿ ಕಟ್ಟಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು