News Karnataka Kannada
Thursday, May 09 2024
ಮೈಸೂರು

ಕರ್ನಾಟಕದಲ್ಲಿ ಮಾನವ ಬಂಡವಾಳ ವರದಿ ಬಿಡುಗಡೆ

Karnataka releases human capital report
Photo Credit :

ಮೈಸೂರು: ಕರ್ನಾಟಕದಲ್ಲಿ ಮಾನವ ಬಂಡವಾಳ ಹೊಸಯುಗದ ಉದ್ಯೋಗಿಗಳಿಗೆ ನವಯುಗದ ಕೌಶಲ್ಯಗಳ ಅಗತ್ಯತೆ – ಒಂದು ದೃಷ್ಟಿ ಕೋನ ವರದಿಯನ್ನು ಬೆಂಗಳೂರಿನಲ್ಲಿ ನಡೆದ ಬಿಸಿ ಐಸಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು

ಮೈಸೂರಿನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಡೆವಲಪ್ ಮೆಂಟ್  ಸಂಸ್ಥೆಯು ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ಕಾಮರ್ಸ್ (ಬಿಸಿ ಐ ಸಿ) ಗಾಗಿ ಸಿದ್ಧಪಡಿಸಿತು. ಮೈಸೂರಿನ ಎಸ್ಡಿಎಮ್ ಐ ಎಮ್ಡಿ ಸಂಸ್ಥೆಯ ಬಿಸಿ ಐ ಸಿ ಸೆಂಟರ್ ಫಾರ್ ಎಕ್ಸಲೆನ್ಸ್ ಉದ್ಯಮ ಮತ್ತು ಶಿಕ್ಷಣ ಕ್ಷೇತ್ರಗಳ ನಡುವಿನ ಸಹಯೋಗದ ವೇಗವನ್ನು ಹೆಚ್ಚಿಸುವ ಮೂಲಕ ಸಮಾಜವನ್ನು ಉನ್ನತಿಗೊಳಿಸುವ ಗುರಿಯನ್ನು ಹೊಂದಿದ್ದು, ಈ ವರದಿಯು ಅದಕ್ಕೆ ಪೂರಕವಾಗಿದೆ.

ಅನೇಕ ಶ್ರೇಷ್ಠ ಉದ್ಯಮಿಗಳು ಹಾಗೂ ಶಿಕ್ಷಣ ತಜ್ಞರೊಂದಿಗೆ ನಡೆಸಿದ ಸಂದರ್ಶನಗಳು ಮತ್ತು ಆಳವಾದ ಸಂಶೋಧನೆ ಆಧಾರದಲ್ಲಿ ಈ ವರದಿಯನ್ನು ತಯಾರಿಸಲಾಗಿದೆ. ಈ ವರದಿಯು ಏಳು ವಿವಿಧ ಉದ್ಯಮ ಕ್ಷೇತ್ರಗಳಾದ ಭಾರಿ ಉದ್ಯಮ, ಆಟೋ ಮೊಬೈಲ್ ತಯಾರಿಕೆ, ಆತಿಥ್ಯ, ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ, ಮಾಹಿತಿ ತಂತ್ರಜ್ಞಾನ ಹಾಗೂ ಸಂಬಂಧಿತ ಸೇವೆಗಳು, ಔಷಧೀಯ ಮತ್ತು ಸಲಹಾ – ಇವುಗಳಲ್ಲಿ ಪ್ರಸಕ್ತ ಇರುವ ಕೌಶಲ್ಯ ಅಂತರವನ್ನು ಮೌಲ್ಯ ಮಾಪನಮಾಡಿದೆ. ಈ ಅಧ್ಯಯನವು ಭವಿಷ್ಯದ ನವಕೌಶಲ್ಯಗಳ ಅವಶ್ಯಕತೆಯ ಬಗ್ಗೆ ಅಂದಾಜು ಮಾಡಿದೆ. ಹಾಗೆಯೇ ಕರ್ನಾಟಕದ ಉದ್ಯಮಗಳಲ್ಲಿ ಇರುವ ಕೌಶಲ್ಯತೆಗಳ ಅವಶ್ಯಕತೆಯನ್ನು ಪೂರೈಸಲು ಶೈಕ್ಷಣಿಕ ಸಂಸ್ಥೆಗಳು ತೆಗೆದುಕೊಳ್ಳ ಬೇಕಾದ ಕ್ರಮಗಳ ಬಗ್ಗೆ ಕೂಡ ವರದಿಯಲ್ಲಿ ಸೂಚಿಸಲಾಗಿದೆ. ಯುವಪೀಳಿಗೆ ನವಕೌಶಲ್ಯತೆಗಳನ್ನು ಕಲಿಸುವ ಮೂಲಕ ಅವರನ್ನು ಉದ್ಯೋಗಕ್ಕೆ ಯೋಗ್ಯರನ್ನಾಗಿ ಹಾಗೂ ಸಂಪನ್ಮೂಲರನ್ನಾಗಿ ಮಾಡಲು, ಸರ್ಕಾರ, ಉದ್ಯಮ ಮತ್ತು ಶಿಕ್ಷಣ – ಈ ಮೂರು ಕ್ಷೇತ್ರಗಳು, ವೈಯಕ್ತಿಕ ಹಾಗೂ ಜಂಟಿಯಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಚೌಕಟ್ಟುಗಳನ್ನು ಈ ವರದಿಯು ಶಿಫಾರಸು ಮಾಡಿದೆ.

ಉದ್ಯಮ ಕ್ಷೇತ್ರದ ನೇತಾರರ ಉಪಸ್ಥಿತಿಯಲ್ಲಿ ವರದಿಯನ್ನುಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹಾಗೂ ಸಚಿವರು, ವರದಿಯನ್ನು ಪ್ರಶಂಸಿಸಿದರು.

ಡಾ. ಬಿ. ವೆಂಕಟರಾಜ್ , ಅಸೋಸಿಯೇಟ್ ಪ್ರೋಫೆಸರ್ – ಅರ್ಥಶಾಸ್ತ್ರ, ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಮ್ಯಾನೇಜ್ ಮೆಂಟ್ ಡೆವಲಪ್ ಮೆಂಟ್ನ ಸಂಶೋಧಕರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು