Categories: ಮೈಸೂರು

ಮೈಸೂರು ಮೃಗಾಲಯದಿಂದ ಬನ್ನೇರುಘಟ್ಟಕ್ಕೆ ಜಿರಾಫೆ

ಮೈಸೂರು: ಒಂದೂವರೆ ವರ್ಷದ ಶಿವಾನಿ ಹೆಸರಿನ ಹೆಣ್ಣು ಜಿರಾಫೆಯನ್ನು ನಗರದಲ್ಲಿನ ಚಾಮರಾಜೇಂದ್ರ ಮೃಗಾಲಯದಿಂದ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಪ್ರಾಣಿ ವಿನಿಮಯ ಯೋಜನೆಯಡಿ ಕಳುಹಿಸಿಕೊಡಲಾಗಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕೆಲ ವರ್ಷಗಳಿಂದ ಜಿರಾಫೆ ನೀಡುವ ಬಗ್ಗೆ ಬೇಡಿಕೆ ಇದ್ದ ಹಿನ್ನೆಲೆ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆ ಅನ್ವಯ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ 8 ಜಿರಾಫೆಗಳ ಪೈಕಿ ಒಂದೂವರೆ ವರ್ಷದ (1.6ವರ್ಷ) ಶಿವಾನಿ ಹೆಸರಿನ ಹೆಣ್ಣು ಜಿರಾಫೆಯನ್ನು ವಿಶೇಷ ವಾಹನದ ಮೂಲಕ ಕಳುಹಿಸಿಕೊಡಲಾಯಿತು.

13.5 ಅಡಿ ಎತ್ತರ ಇರುವ ಶಿವಾನಿ ಜಿರಾಫೆ 2022ರಲ್ಲಿ ಮೈಸೂರು ಚಾಮರಾಜೇಂದ್ರ ಮೃಗಾಲಯದಲ್ಲಿರುವ ಭರತ ಮತ್ತು ಬಬ್ಲಿ ಜಿರಾಫೆಗಳಿಗೆ ಜನಿಸಿದೆ. ಬನ್ನೇರುಘಟ್ಟ ಮೃಗಾಲಯ ತಲುಪಿದ ಶಿವಾನಿಯನ್ನು ಅಲ್ಲಿರುವ ಉಳಿದ ಜಿರಾಫೆಗಳೊಂದಿಗೆ ಬಿಡಲಾಯಿತು. ಈ ಮೂಲಕ ವರ್ಷದ ಆರಂಭದಲ್ಲಿಯೇ 2 ಜಿರಾಫೆಗಳನ್ನು ಮೈಸೂರು ಮೃಗಾಲಯದಿಂದ ಬೇರೆಡೆಗೆ ಕಳುಹಿಸಿಕೊಟ್ಟಂತಾಗಿದೆ.

ಇದೇ ವರ್ಷ ಜನವರಿಯಲ್ಲಿ ಹಂಪಿ ಮೃಗಾಲಯಕ್ಕೆ ಶಂಕರ ಹೆಸರಿನ ಎರಡೂವರೆ ವರ್ಷದ ಗಂಡು ಜಿರಾಫೆಯನ್ನು ಕಳುಹಿಸಿಕೊಡಲಾಗಿತ್ತು. ಈಗ ಬನ್ನೇರುಘಟ್ಟಕ್ಕೆ ಒಂದೂವರೆ ವರ್ಷದ ಹೆಣ್ಣು ಜಿರಾಫೆಯನ್ನು ರವಾನೆ ಮಾಡುವ ಮೂಲಕ ಎರಡು ತಿಂಗಳಲ್ಲಿ ಎರಡು ಜಿರಾಫೆಯನ್ನು ಮೈಸೂರು ಚಾಮರಾಜೇಂದ್ರ ಮೃಗಾಲಯ ಪ್ರಾಣಿ ವಿನಿಮಯ ಯೋಜನೆಯಡಿ ಕಳುಹಿಸಿಕೊಟ್ಟಂತಾಗಿದೆ.

ಮೈಸೂರು ಮೃಗಾಲಯದಲ್ಲಿ ಯುವರಾಜ, ಖುಷಿ, ಭರತ ಸೇರಿದಂತೆ 7 ಜಿರಾಫೆಗಳಿದ್ದು, ಪ್ರಾಣಿ ವಿನಿಮಯ ಯೋಜನೆಯಡಿ ಇನ್ನೂ ಕೆಲವನ್ನು ಸ್ಥಳಾಂತರ ಮಾಡುವ ಪ್ರಸ್ತಾವ ಮೃಗಾಲಯ ಪ್ರಾಧಿಕಾರದ ಮುಂದಿದ್ದು, ಇನ್ನೂ ನಿರ್ಧಾರ ಪ್ರಕಟವಾಗಿಲ್ಲ. ಜತೆಗೆ ಈ ಯೋಜನೆಯಡಿ ಮೈಸೂರು ಮೃಗಾಲಯಕ್ಕೆ ವಿದೇಶದಿಂದ ಆಫ್ರಿಕಾದ ಆನೆ, ಜಾಗ್ವಾರ್, ಚೀತಾ, ಗೊರಿಲ್ಲಾ ಮತ್ತು ಚಿಂಪಾಂಜಿ ತರುವ ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು ಚಾಮರಾಜೇಂದ್ರ ಮೃಗಾಲಯದಿಂದ ದೇಶದ ಬೇರೆ ಬೇರೆ ಮೃಗಾಲಯ ಮತ್ತು ರಾಜ್ಯದ ಇತರೆ ಮೃಗಾಲಯಗಳಿಗೆ ಈವರೆಗೆ 7 ಜಿರಾಫೆಗಳನ್ನು ಯಶಸ್ವಿಯಾಗಿ ರವಾನೆ ಮಾಡಲಾಗಿದೆ. 2018ರಲ್ಲಿ ಗೌರಿ ಹೆಸರಿನ ಹೆಣ್ಣು ಜಿರಾಫೆಯನ್ನು ಬನ್ನೇರುಘಟ್ಟಕ್ಕೆ, 2019ರಲ್ಲಿ ಜಯಚಾಮರಾಜ ಎಂಬ ಗಂಡು ಜಿರಾಫೆಯನ್ನು ಅಸ್ಸಾಂನ ಗುವಾಹಟಿಗೆ, 2020ರಲ್ಲಿ ಯದುವೀರ್ ಹೆಸರಿನ ಗಂಡು ಜಿರಾಫೆಯನ್ನು ಬನ್ನೇರುಘಟ್ಟ, 2021ರಲ್ಲಿ ಆದ್ಯವೀರ್ ಮತ್ತು ಬಾಲಾಜಿ ಹೆಸರಿನ ಎರಡು ಗಂಡು ಜಿರಾಫೆಗಳನ್ನು ಸಿಂಗಾಪುರಕ್ಕೆ ಹಾಗೂ ಶಂಕರ ಹೆಸರಿನ ಗಂಡು ಜಿರಾಫೆಯನ್ನು ಕಳೆದ ತಿಂಗಳಷ್ಟೇ ವಿಜಯಪುರದಲ್ಲಿನ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ರವಾನಿಸಲಾಗಿತ್ತು. ಈಗ ಮತ್ತೆ ಬನ್ನೇರುಘಟ್ಟಕ್ಕೆ ಶಿವಾನಿ ಹೆಸರಿನ ಹೆಣ್ಣು ಜಿರಾಫೆ ಕಳುಹಿಸಲಾಗಿದೆ.

Gayathri SG

Recent Posts

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

11 mins ago

ಹುಬ್ಬಳ್ಳಿ ಕೊಲೆ ಪ್ರಕರಣ : ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.

25 mins ago

ಗತವೈಭವ ಸಾರುವ ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…

37 mins ago

ನ್ಯೂಸ್ ಕರ್ನಾಟಕ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ : ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…

53 mins ago

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ : ಶೈಲೇಂದ್ರ

ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…

1 hour ago

ಭಾರತೀಯರಿಗೆ ಗುಡ್‌ ನ್ಯೂಸ್‌ : ವೀಸಾ ಇಲ್ಲದೆ ರಷ್ಯಾಕ್ಕೆ ಹೋಗುವ ಅವಕಾಶ

ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…

1 hour ago