Categories: ಮೈಸೂರು

ಚಾಕು ಇರಿತದಿಂದ ಗಾಯಗೊಳಗಾದ ವ್ಯಕ್ತಿಗಳಿಗೆ ಸಾಂತ್ವನ ಹೇಳಿದ ಮಾಜಿ ಶಾಸಕ ಬಿ ಹರ್ಷವರ್ಧನ್

ನಂಜನಗೂಡು: ನಗರದ ನೀಲಕಂಠನಗರ ಬಡಾವಣೆಯಲ್ಲಿ ಹುಟ್ಟುಹಬ್ಬ ಆಚರಣೆಯಲ್ಲಿ ನಿರತರಾಗಿದ್ದ ವೇಳೆ ನಿನ್ನೆ ರಾತ್ರಿ ಎರಡು ಕೋಮಿನ ನಡುವೆ ಘಷ೯ಣೆ ನಡೆದು ಇಬ್ಬರು ಯುವಕರಿಗೆ ಡ್ರ್ಯಾಗರ್ ನಿಂದ ಇರಿದು ಗಂಭೀರವಾಗಿ ಗಾಯಗಳಾಗಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ದಾಖಲಾಗಿರುವ ವಿಚಾರ ತಿಳಿದು ಇಂದು ಮಾಜಿ ಶಾಸಕ ಬಿ ಹರ್ಷವರ್ಧನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ತಿಳಿದ ತಕ್ಷಣ ಸಂಬಂಧ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಗಲಾಟೆ ನಡೆದಿರುವ ಸುತ್ತ ಮತ್ತಲ ಪ್ರದೇಶದಲ್ಲಿ ಪೊಲೀಸ್ ಕಾವಲಿರಿಸುವಂತೆ ಹಾಗೂ ತಪ್ಪಿತಸ್ಥರ ವಿರುದ್ದ ಸೂಕ್ತ ರೀತಿಯ ಕಾನೂನು ಕ್ರಮ ಜರುಗಿಸುವಂತೆ ಮಾಜಿ ಶಾಸಕ ಬಿ ಹರ್ಷವರ್ಧನ್ ಪೊಲೀಸ ಅಧಿಕಾರಿಗಳಿಗೆ ಸೂಚಿಸಿದರು

ನಂಜನಗೂಡು ತಾಲ್ಲೂಕಿನ ಜನರೇ ಕ್ಷುಲ್ಲಕ ಕಾರಣಗಳು, ವದಂತಿಗಳು ಹಾಗೂ ಸಣ್ಣ ಪುಟ್ಟ ವಿಚಾರಗಳಿಗಾಗಿ ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡಿಕೊಳ್ಳದಂತೆ ಮನವಿ ಮಾಡಿದರು.

Gayathri SG

Recent Posts

ಮತದಾನದ ಹಕ್ಕು ಚಲಾಯಿಸಿದ ಹಿಂದೂ ಹುಲಿ ಬಸನಗೌಡ ಪಾಟೀಲ್ ಯತ್ನಾಳ್

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎರಡನೇ ಹಂತದ ಮತದಾನದ ಭಾಗವಾಗಿ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನಿಂದ ವೋಟಿಂಗ್ ನಡೆಯುತ್ತಿದೆ.

2 mins ago

ಭ್ರಷ್ಟಾಚಾರ ಮುಕ್ತ, ಜಾತಿ ಮುಕ್ತ ವ್ಯವಸ್ಥೆಗಾಗಿ ಮತ ನೀಡಿ ಎಂದ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ನ ಗಾಂಧಿನಗರ ಲೋಕಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

9 mins ago

ಆಹಾರದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ಬ್ಯಾನ್‌

ಕಾಟನ್‌ ಕ್ಯಾಂಡಿ ಮತ್ತು ಗೋಬಿ ಬ್ಯಾನ್‌ ಆದ ಬೆನ್ನಲ್ಲೇ ಆಹಾರದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ಬ್ಯಾನ್‌ ಮಾಡಲಾಗಿದೆ.ಬಳಕೆ ಮಾಡಿದರೆ 10…

14 mins ago

ಮಲ್ಪೆ ಬೀಚ್ ನ‌ ಸೊಬಗನ್ನು ಕೆಡಿಸುತ್ತಿವೆ ಬಿಯರ್ ಬಾಟಲ್, ಪ್ಲಾಸ್ಟಿಕ್ ತ್ಯಾಜ್ಯ

ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣ ಮಲ್ಪೆ ಬೀಚ್ ಇದೀಗ ಕಸದ ಕೊಂಪೆಯಾಗಿ ಮಾರ್ಪಡುತ್ತಿದೆ. ಎಲ್ಲೆಂದರಲ್ಲಿ ಬಿಸಾಡಿರುವ ಪ್ಲಾಸ್ಟಿಕ್ ಬಾಟಲ್, ಬಿಯರ್…

30 mins ago

ಗಣೇಶನ ಮೂರ್ತಿ ಜೊತೆ 3ನೇ ಬಾರಿ ನಭಕ್ಕೆ ಹಾರಿದ ಸುನೀತಾ ವಿಲಿಯಮ್ಸ್‌

ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಇದೀಗ ಮತ್ತೆ ಬಾಹ್ಯಾಕಾಶಕ್ಕೆ ಹಾರಲು ಸಿದ್ದರಾಗಿದ್ದು, ಇಂದು ಅಂತಾರಾಷ್ಟ್ಪೀಯ ಬಾಹ್ಯಾಕಾಶ ನಿಲ್ದಾಣಕ್ಕೆ…

39 mins ago

ಲೋಕಸಭೆ ಚುನಾವಣೆ : ಕುಟುಂಬ ಸಮೇತ ಮತದಾನ ಮಾಡಿದ ರಮೇಶ್ ಜಿಗ್ಜಣಿಗಿ

ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಸದ ರಮೇಶ ಜಿಗಜಿಣಗಿ ಅವರು ಕುಟುಂಬ ಸಮೇತ ಮಂಗಳವಾರ ಬೆಳಿಗ್ಗೆ ಮತ ಚಲಾಯಿಸಿದರು

41 mins ago